ಸನ್ಮಾರ್ಗ ವಾರ್ತೆ
ಪೊಲೀಸರು ಬಲವಂತದಿಂದ ಬಾಂಗ್ಲಾದೇಶಕ್ಕೆ ಕಳುಹಿಸಲ್ಪಟ್ಟ ಗರ್ಭಿಣಿ ಸುನಾಲಿ ಖಾತೂನ್ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಸವಿಸಿದ್ದಾರೆ. ಐದು ತಿಂಗಳ ಗರ್ಭಿಣಿಯನ್ನು ಬಾಂಗ್ಲಾದೇಶಿ ಎಂದು ಹೇಳಿ ಪುಟ್ಟ ಮಗನ ದೆಹಲಿ ಪೊಲೀಸರು ಗಡಿಯಾಚೆ ಅಟ್ಟಿದ್ದರು. ಆ ಬಳಿಕ ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲೇರಿತ್ತು. ಆಕೆಯನ್ನು ಮತ್ತು ಮಗುವನ್ನು ಮರಳಿ ಕರೆತರುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮರಳಿ ಭಾರತಕ್ಕೆ ಬಂದಿದ್ದರು. ಇದೀಗ ಪಶ್ಚಿಮ ಬಂಗಾಳದಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ.
25 ವರ್ಷದ ಸುನಾಲಿ ಖಾತೂನ್ ಅವರು ಡಿಸೆಂಬರ್ ಆರರಂದು ಮರಳಿ ಭಾರತಕ್ಕೆ ಬಂದಿದ್ದರು. ಅವರ ಜೊತೆ ಎಂಟು ವರ್ಷದ ಅವರ ಮಗನೂ ಇದ್ದ.
ಸುನಾಲಿ ಅವರ ಪತಿ ದಾನಿಶ್, ಅವರ ಮಗ ಮತ್ತು 32 ವರ್ಷದ ಇನ್ನೋರ್ವ ಮಹಿಳೆ ಸ್ವೀಟಿ ಬಿಬಿ,, ಮತ್ತು 16 ಮತ್ತು ಆರು ವರ್ಷದ ಅವರು ಇಬ್ಬರ ಮಕ್ಕಳನ್ನು ದೆಹಲಿ ಪೊಲೀಸರು ಬಂಧಿಸಿ ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟಿದ್ದರು . ಇದು ಜೂನ್ 26ರಂದು ನಡೆದಿತ್ತು. ಹೀಗೆ ಬಂಧಿಸಿ ಒಂದು ವಾರಗಳ ತನಕ ಕಷ್ಟಡಿಯಲ್ಲಿಟ್ಟುಕೊಂಡ ಬಳಿಕ ಅವರನ್ನು ಬಾಂಗ್ಲಾದೇಶಕ್ಕೆ ಅಟ್ಟಲಾಗಿತ್ತು. ಈ ಕಾರ್ಯಾಚರಣೆಗೆ ಪಶ್ಚಿಮ ಬಂಗಾಳದ ಸರಕಾರ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
ಇದೆ ವೇಳೆ ಆಕೆಯ ಗಂಡ ಮಕ್ಕಳು ಮತ್ತು ಇತರರು ಭಾರತಕ್ಕೆ ಮರಳುವುದಕ್ಕಾಗಿ ಸಮಯ ಕಾಯುತ್ತಿದ್ದಾರೆ.












