ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.29: ಬಾಬರಿ ಜಮೀನು ಪ್ರಕರಣದಲ್ಲಿ ಹಾಜರಾಗಿದ್ದು ಮುಸ್ಲಿಮರಿಗಾಗಿ ಮಾತ್ರ ಅಲ್ಲ. ದೇಶದ ಜಾತ್ಯತೀತ ಸ್ವತಂತ್ರ ಚಿಂತನಾಗತಿಯ ಹಿಂದೂಗಳಿಗಾಗಿಯೂ ವಾದಿಸಿರುವೆ ಎಂದು ಹಿರಿಯ ಸುಪ್ರೀಂಕೋರ್ಟು ವಕೀಲ್ ರಾಜೀವ್ ಧವನ್ ಹೇಳಿದರು. ಬಾಬರಿ ಜಮೀನು ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡಿಗಾಗಿ ವಾದಿಸಿದ್ದಕ್ಕಾಗಿ ಸಂಘ ಪರಿವಾರದಿಂದ ಮಲ ಅಭಿಷೇಕವನ್ನು ಎದುರಿಸಬೇಕಾಯಿತು.
ಶಾಂತಿಗಾಗಿ ತೀರ್ಪು ನೀಡುವುದು ಸುಪ್ರೀಂಕೋರ್ಟಿನ ಕೆಲಸ ಅಲ್ಲ. ನ್ಯಾಯಕ್ಕಾಗಿ ತೀರ್ಪು ನೀಡಬೇಕಾಗಿದೆ ಎಂದು ಧವನ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಬರಿ ಜಮೀನು ಪ್ರಕರಣದ ತೀರ್ಪಿನ ನಂತರ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕೇಸಿನ ಹೆಸರಲ್ಲಿ ತಾನು ಅನುಭವಿಸಿದ ಕಿರುಕುಳಗಳನ್ನು ಧವನ್ ವಿವರಿಸಿದರು.
ಬಾಬರಿ ಮಸೀದಿ ವಿಷಯದಲ್ಲಿ ದೇಶದ ವಾತಾವರಣ ಕೆಡಿಸಿದ್ದು ಮುಸ್ಲಿಮರಲ್ಲ ಹಿಂದೂಗಳು ಎಂಬ ತನ್ನ ಹೇಳಿಕೆ ವಿವಾದವಾಗಿತ್ತು. ಇಲ್ಲಿ ಹಿಂದೂ ಎಂದಿದ್ದು ಆರೆಸ್ಸೆಸ್ ಅನ್ನು ಎಂದು ಧವನ್ ಹೇಳಿದರು. ಬಾಬರಿ ಮಸೀದಿಯೊಂದಿಗೆ ಅನ್ಯಾಯವಾಗಿ ವರ್ತಿಸಿದ ಹಿಂದೂಗಳ ಬಗ್ಗೆ ಹೇಳಿದೆ.
1934ರಲ್ಲಿ ಬಾಬರಿ ಮಸೀದಿ ದಾಳಿಗೊಳಗಾಯಿತು. 1949ರಲ್ಲಿ ಮಸೀದಿಯನ್ನು ಅತಿಕ್ರಮಿಸಲಾಯಿತು. 1950 ಮತ್ತು 1992ರಲ್ಲಿ ರಿಸೀವರ್ ಹೊರಡಿಸಿದ ಯಾವ ಆದೇಶವನ್ನು ಹಿಂದೂಗಳು ಪಾಲಿಸಿಲ್ಲ. ಇದರ ಹೆಸರಿನಲ್ಲಿ ನಡೆದ ಆಕ್ರಮಣಗಳೆಲ್ಲವೂ ಹಿಂದೂ ತಾಲಿಬಾನ್ ಯೋಜಿಸಿದ್ದ ಹಿಂದೂಗಳ ಕಡೆಯಿಂದಾದುದು ಎಂದು ಪುನರುಚ್ಚರಿಸುವೆ ಎಂದು ಧವನ್ ಹೇಳಿದರು.
ನ್ಯಾಯ ಜಾರಿಗೆ ತರದೆ ಶಾಂತಿ ನೆಲಸದು ಆದ್ದರಿಂದ ಸುನ್ನಿ ವಕ್ಫ್ ಬೋರ್ಡು ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆನ್ನುವುದ ನನ್ನ ನಿಲುವು ಎಂದು ಧವನ್ ಹೇಳಿದರು. ಅನುಕೂಲ ಕ್ರಮ ಜರಗದಿದ್ದರೂ ತೀರ್ಪಿನ ಲೋಪಗಳನ್ನು ಬಹಿರಂಗಪಡಿಸಲು ಅದರಿಂದ ಸಾಧ್ಯವಿದೆ ಎಂದು ಧವನ್ ಹೇಳಿದರು.












