ಹಿಜಾಬ್ ನಿಷೇಧವನ್ನು ಹಿಂಪಡೆಯುವಂತೆ ಎಸ್.ವೈ.ಎಸ್(SYS) ಸಮ್ಮೇಳನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ

0
72

ಸನ್ಮಾರ್ಗ ವಾರ್ತೆ

ಮಂಗಳೂರು: ಮುಸ್ಲಿಂ ಮಹಿಳೆ ಮನೆಯಿಂದ ಹೊರಡುವಾಗ ಬುರ್ಖಾ ಧರಿಸಬೇಕು. ಹಿಂದಿನ ಸರ್ಕಾರದ ಹಿಜಾಬ್ ನಿಷೇಧವನ್ನು ಹಿಂಪಡೆಯುವಂತೆ ಶಾಪಿ ಸಅದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದಾಗ​ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗಿದೆ. 2ಬಿ 4% ಮೀಸಲಾತಿಯಲ್ಲಿ ವಾಪಾಸ್ ಪಡೆದಿದ್ದನ್ನು ಮರಳಿಸುವಂತೆ ಮತ್ತು 2013 ರ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

ಮಂಗಳೂರು ಸಿಎಎ ಎನ್​ಆರ್​ಸಿ ಗೋಲಿಬಾರ್​ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಗೋಲಿಬಾರ್ ವೇಳೆ ಯುವಕರ ಮೇಲಿರುವ ಕೇಸ್ ವಾಪಾಸ್ ತೆಗೆಯುವಂತೆ ಆಗ್ರಹಿಸಲಾಗಿದೆ. ಹುಬ್ಬಳ್ಳಿ, ಡಿ‌.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರ ತಕ್ಷಣ ಬಿಡುಗಡೆಗೆ ಮತ್ತು ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದ ಸಮಿತಿ ವಿಚಾರವಾಗಿ ಆದ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಲಾಯಿತು.

ಎಸ್​ವೈಎಸ್ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ಟೀಕೆ, ವಿವಾದ ಮಾಡಿದರು. ಆದರೆ ಇದಕ್ಕೆಲ್ಲಾ ಹೆದರುವುದಿಲ್ಲ. ನೀವು ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ಗೆ ಅಲ್ಲ, ಸರ್ಕಾರಕ್ಕೆ. ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ ಎಂದು ಹೇಳಿದ್ದಾರೆ.

ನಾವು ನಿಮ್ಮ ಜೊತೆ ಇದ್ದು, ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ನಾನು ಕನಕಪುರದ ಬಂಡೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.