ಅತ್ಯಾಚಾರ ಪ್ರಕರಣ ಹಿನ್ನೆಲೆ| ಚೀಫ್ ಜಸ್ಟಿಸ್‍ರನ್ನು ಕಟುವಾಗಿ ಟೀಕಿಸಿದ ನಟಿ ತಾಪ್ಸಿ ಪನ್ನು: ‘ಇದು ಪರಿಹಾರವೇ ಅಥವಾ ಶಿಕ್ಷೆಯೇ?’

0
959

ಸನ್ಮಾರ್ಗ ವಾರ್ತೆ

ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನೇ ಆತನಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಮದುವೆಯಾಗುವೆಯಾ ಎಂದು ಪ್ರಶ್ನಿಸಿದ ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆಯವರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೊರಗೆ ಯಾರಿಗಾದರೂ ಹೇಳಿದರೆ ಮುಖಕ್ಕೆ ಆಸಿಡ್ ಎರಚುವೆ ಎಂದು ಬೆದರಿಸಿ ಹದಿನಾರು ವರ್ಷದ ಬಾಲಕಿಯನ್ನು ಹನ್ನೆರಡು ಸಲ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಯೊಡನೆ ಕೋರ್ಟು ಹೀಗೆ ಪ್ರಶ್ನಿಸಿತ್ತು ಇದೊಂದು ವಿಚಿತ್ರ ಹೇಳಿಕೆ. ‘ಇದು ಪರಿಹಾರವೇ ಅಥವಾ ಶಿಕ್ಷೆಯೇ?’ ಎಂದು ನಟಿ ತಾಪ್ಸಿ ಪನ್ನು ಕೇಳಿದ್ದಾರೆ.

ಆ ಬಾಲಕಿಯಲ್ಲಿ ಯಾರಾದರೂ ಈ ಪ್ರಶ್ನೆ ಕೇಳಿದ್ದಾರಾ. ತನ್ನನ್ನು ಅತ್ಯಾಚಾರ ಮಾಡಿದವನನ್ನೇ ಮದುವೆಯಾಗಲು ಬಯಸುವೆಯಾ ಎಂದು ಯಾರಾದರೂ ಹೇಳಿದ್ದಾರೆಯೇ. ಆರೋಪಿಯನ್ನು ಹೇಗೆ ಹೀಗೆ ಕೇಳಲು ಸಾಧ್ಯ? ಇದು ಅಪರಾಧಕ್ಕೆ ಪರಿಹಾರವೇ ಅಥವಾ ಶಿಕ್ಷೆಯೇ ಎಂದು ತಾಪ್ಸಿ ಪನ್ನು ಪ್ರಶ್ನಿಸಿದರು.

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ದೂರಿನಲ್ಲಿ ಮಹಾರಾಷ್ಟ್ರದ ಸ್ಟೇಟ್ ಇಲೆಕ್ಟ್ರಿಕ್ ಪ್ರೊಡಕ್ಷನ್ ಕಂಪೆನಿಯ ಟೆಕ್ನಿಶಿಯನ್ ಮೋಹಿತ್ ಸುಭಾಶ್ ಚವಾನ್ ವಿರುದ್ಧ ಪೊಕ್ಸೋ ಕಾನೂನು ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಚೀಫ್ ಜಸ್ಟಿಸ್ ಬೊಬ್ಡೆ ಹೀಗೆ ಕೇಳಿದ್ದಾರೆ.

ಗಾಯಕಿ ಸೋನಾ ಮಹಾಪಾತ್ರ ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ಹೆಚ್ಚು ಅಸ್ವಾಸ್ಥ್ಯವುಂಟು ಮಾಡುವ ಪ್ರಕ್ರಿಯೆಯಾಗಿದೆ. ಅತ್ಯಾಚಾರ ಸಂತ್ರಸ್ತೆಯು ಆರೋಪಿಯನ್ನೇ ಮದುವೆಯಾಗಲು ಸಾಧ್ಯವೇ? ಹಳೆ ಕಾಲದ ಬಾಲಿವುಡ್ ರೀತಿಯ ಪರಿಹಾರವಾಗಿರಬಹುದು. ಆದರೆ ಸುಪ್ರೀಂ ಕೋರ್ಟಿಗೆ ಈ ರೀತಿ ಪ್ರಶ್ನಿಸಲು ಸಾಧ್ಯವಾಯ್ತು ಎಂದು ಗಾಯಕಿ ಸೋನಾ ಮಹಾಪಾತ್ರ ಕೇಳಿದರು.

ಮನೆಯಲ್ಲಿ ಯಾರು ಇಲ್ಲದಾಗ ಒಳಗೆ ಬಂದು ಬಾಲಕಿಯ ಕೈ ಕಾಲುಗಳುನ್ನು ಕಟ್ಟಿಹಾಕಿ ಆರೋಪಿ ಅತ್ಯಾಚಾರ ಮಾಡಿದನೆನ್ನಲಾಗಿದೆ. ಘಟನೆಯನ್ನು ಹೊರಗೆ ಹೇಳಿದೆ ಮುಖಕ್ಕೆ ಆಸಿಡ್ ಹಾಕುವೆ ಎಂದು ಬೆದರಿಸಿ 12 ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಮನೆಯಲ್ಲಿ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಮನೆಯವರಿಗೆ ಈ ವಿಷಯ ಗೊತ್ತಾಗಿತ್ತು. ಪೊಲೀಸರಿಗೆ ದೂರು ನೀಡಲು ಕುಟುಂಬ ನಿರ್ಧರಿಸಿದ್ದರಿಂದ ಆರೋಪಿಯ ಅಮ್ಮ ಮನೆಗೆ ಬಂದು ಬಾಲಕಿಯನ್ನು ಹದಿನೆಂಟು ವರ್ಷ ಆದಾಗ ಮಗ ಮದುವೆಯಾಗುತ್ತಾನೆ ಎಂದು ಭರವಸೆ ಕೊಟ್ಟಿದ್ದರು.

ಈ ನಡುವೆ ಆರೋಪಿಯ ಅಮ್ಮ, ಆರೋಪಿ ಮತ್ತು ಬಾಲಕಿ ನಿಕಟವಾಗಿದ್ದರು. ಪರಸ್ಪರ ಸಮ್ಮತಿಯಿಂದ ದೈಹಿಕ ಸಂಬಂಧ ಮಾಡಿಕೊಂಡಿದ್ದರು ಸ್ಟಾಂಪ್ ಪೇಪರಿನಲ್ಲಿ ಸಹಿ ಹಾಕಿಸಿಕೊಂಡರು. ಬಾಲಕಿಯ ತಾಯಿಯ ಸಹಿಯನ್ನು ಪಡೆದುಕೊಂಡಿದ್ದು, ಸ್ಟಾಂಪ್ ಪೇಪರಿನಲ್ಲಿ ಏನು ಬರೆದಿದೆ ಎಂದು ಗೊತ್ತಿಲ್ಲದೆ ಬಾಲಕಿಯ ಅಮ್ಮ ಸಹಿ ಹಾಕಿದ್ದರು.

ಹದಿನೆಂಟು ವರ್ಷ ಆದಾಗ ಮದುವೆಯಾಗುವ ಮಾತಿನಿಂದ ತಾಯಿ ಮಗ ಹಿಂದೆ ಸರಿದದ್ದರಿಂದ ಬಾಲಕಿಯ ಕುಟುಂಬ ಪೊಲೀಸರಿಗೆ ದೂರಯ ನೀಡಿದ್ದರು. ಸೆಶನ್ಸ್ ಕೋರ್ಟಿನಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಕ್ಕಿತ್ತು. ಬಾಲಕಿ ಬಾಂಬೆ ಹೈಕೋರ್ಟಿನ ಮೊರೆ ಹೋದಾಗ ಪೊಕ್ಸೊ ಪ್ರಕರಣದಲ್ಲಿ ಜಾಮೀನು ನೀಡುವಂತಿಲ್ಲ ಎಂದು ಆದೇಶ ಹೊರಡಿಸಿತು. ನಂತರ ಆರೋಪಿ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟು ವಿಚಿತ್ರ ಪ್ರಸ್ತಾವ ಮುಂದಿಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.