ಧ್ಯೇಯ ಧೋರಣೆಯಲ್ಲಿ ತಜ್ದೀದ್

0
258

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಇಸ್ಲಾಮೀ ಸಂಘಟನೆಯಲ್ಲಿ ಅದರ ಧೋರಣೆ, ಸಿದ್ಧಾಂತವು ತಜ್ದೀದ್‌ನ ಅಗತ್ಯದ ಪ್ರಮುಖ ಭಾಗವಾಗಿದೆ. ಇಮಾಮ್ ಹಸನುಲ್ ಬನ್ನಾ ಮತ್ತು ಇಮಾಮ್ ಮೌದೂದಿಯವರು ಒಂದು ವೃತ್ತವನ್ನು ನಿರ್ಮಿಸಿದ್ದಾರೆ. ಆ ವೃತ್ತದ ವ್ಯಾಪ್ತಿಯಲ್ಲಿದ್ದುಕೊಂಡೇ ಅದರ ಸಂಚಾರವಿದೆ.

ಎಡ ಬಲ ನೋಡದೆ ವ್ಯಕ್ತಿಯನ್ನು ತರಬೇತಿಗೊಳಿಸಿ, ಕುಟುಂಬವನ್ನು ಮೌಲ್ಯಯುತವನ್ನಾಗಿ ಮಾಡಿ ಸಮಾಜವನ್ನು ಬದಲಿಸಿ, ಕುರ್‌ಆನ್ ಮತ್ತು ಸುನ್ನತ್‌ನ ತಳಹದಿಯಲ್ಲಿ ಇಸ್ಲಾಮೀ ಖಿಲಾಫತ್‌ನ ಸ್ಥಾಪನೆ ಮಾಡಿ, ಆ ರೇಖೆಯಲ್ಲಿ ಸಂಚರಿಸಿ ಅದು ಕೊನೆಗೊಳ್ಳುತ್ತದೆ. ಈ ನೂರು ವರ್ಷದ ಸಂಚಾರದಲ್ಲಿ ಈ ಇಸ್ಲಾಮೀ ಸಂಘಟನೆಯು ಸಹಜವಾಗಿಯೇ ಬಹಳಷ್ಟು ಅನುಭವವನ್ನು ಗಳಿಸಿಕೊಂಡಿದೆ.

ಈ ಅನುಭವದಲ್ಲಿ ಅನುಕೂಲವೂ ಇದೆ, ಪ್ರತಿಕೂಲವೂ ಇದೆ. ನವೋತ್ಥಾನ ನಾಯಕರ ಹಲವು ಚಿಂತನೆಗಳು ಯಶಸ್ಸು ಕಂಡಿವೆ. ಹಾಗೆಯೇ ಆ ಮಹಾನ್ ನಾಯಕರ ಚಿಂತನೆಗಳಿಗೆ ವಿರುದ್ದವಾದವುಗಳು ಕೂಡಾ ಬಳಿಕ ಜಗತ್ತಿನಲ್ಲಿ ಘಟಿಸಿದವು.

ಆ ಕುರಿತು ಆಳವಾದ ಅಧ್ಯಯನದ ಅಗತ್ಯವಿದೆ. ಸಯ್ಯದ್ ಮೌದೂದಿ ಹಾಗೂ ಹಸನುಲ್ ಬನ್ನಾರವರು ಎಳೆದ ರೇಖೆಯಲ್ಲಿ ಇಸ್ಲಾಮೀ ಸಂಘಟನೆಯು ಸಾಗಿ ಗುರಿ ಮುಟ್ಟುವುದು ಸಾಧ್ಯ ಎಂದು ಚಿಂತಿಸಲಾಗದಂತಹ ಜಗತ್ತು ಇಸ್ಲಾಮೀ ಸಂಘಟನೆಯ ಮುಂದಿದೆ ಎಂಬುದನ್ನು ತಳ್ಳಿಹಾಕಲಾಗದು. ಇಂತಹ ಸಂದರ್ಭದಲ್ಲಿ ಗುರಿ, ಧೋರಣೆ, ಯೋಜನೆ, ನಿಲುವುಗಳಲ್ಲಿ ಬದಲಾವಣೆ ಬೇಕಾಗಬಹುದು.

ಇಂತಹದ್ದೊಂದು ಮುಂದಾಲೋಚನೆಯು ಈ ಹಿಂದೆ ತಿಳಿಸಿದಂತೆ ಟ್ಯುನೀಶಿಯಾದಲ್ಲಿ ರಾಶಿದುಲ್ ಗನೂಶಿಯವರ ಸಂದೇಶ ಪ್ರಚಾರವು ರಾಜಕೀಯದ ನಿಲುವಿನಲ್ಲಿ ಬದಲಾವಣೆ ತರುವ ಹಂತಕ್ಕೆ ತಲುಪಿತ್ತು. ಅದರೊಂದಿಗೆ, ಧರ್ಮವು ರಾಜಕೀಯವನ್ನು ಪ್ರತ್ಯೇಕಿಸುತ್ತಿದೆ ಎಂಬ ಆರೋಪವನ್ನು ಟ್ಯುನೀಶಿಯಾದ ಇಸ್ಲಾಮಿಸ್ಟರು ಎದುರಿಸುತ್ತಿದ್ದಾರೆ. ಟರ್ಕಿ ಬಹಳ ಹಿಂದೆಯೇ ಅದನ್ನು ಮಾಡಿತು. ಮೊರೊಕ್ಕೋ ಈ ನಿಲುವಿನತ್ತ ತನ್ನ ಧ್ಯೇಯ, ಧೋರಣೆಯನ್ನೇ ಬದಲಿಸಿತು.

ಈಜಿಪ್ಟ್ ನಲ್ಲಿ ಇಖ್ವಾನ್ ಈ ವಿಚಾರದಲ್ಲಿ ಚರ್ಚೆ ಪ್ರಾರಂಭಿಸಿದರೂ ಅಂತಿಮ ತೀರ್ಮಾನ ತಳೆಯುವ ಧೈರ್ಯವನ್ನು ಅದು ತೋರಲಿಲ್ಲ. ಅದರ ಫಲವಾಗಿ ಮುಹಮ್ಮದ್ ಮುರ್ಸಿಯವರ ಪತನವಾಯಿತು ಎಂದು ಚಿಂತಿಸುವವರೂ ಇದ್ದಾರೆ. ಏಷ್ಯನ್ ದೇಶಗಳತ್ತ ಇಸ್ಲಾಮೀ ಸಂಘಟನೆಗಳು ಸಾಗುವಾಗ ಐವತ್ತು ಅರುವತ್ತರಷ್ಟು ವರ್ಷಗಳನ್ನು ದಾಟಿವೆ ಎಂಬುದನ್ನು ತಳ್ಳಿಹಾಕಲಾದು. ಆದರೆ ಬಹಳ ದೂರ ಸಂಚರಿಸಿದೆಯೆಂದೂ ಹೇಳಲಾಗದು. ಅದು ಕೂಡಾ ನಿಧಾನ ಗತಿಯಲ್ಲಿ ಸಂಚರಿಸಿದೆ. ಅದು ತನ್ನ ಸಿದ್ಧಾಂತದ ತಳಹದಿಯಲ್ಲಿ ಬದಲಾವಣೆ ತರದೆ ಪ್ರಾಯೋಗಿಕವಾಗಿ ಕೆಲವು ಕೂಡಿಸಿ ಕಳೆಯುವ ಕಾರ್ಯ ಮಾಡಿವೆ.

ಭಾರತದ ವಿಚಾರಕ್ಕೆ ಬಂದಾಗ ಶೇಕಡ ಹದಿನೈದು ಶತಮಾನದಷ್ಟು ಇರುವ ಈ ದೇಶದಲ್ಲಿ, ಹಿಂದುತ್ವದ ಆಚಾರ ವಿಚಾರ ಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಕಂಡು ಬರುತ್ತಿರುವ ಈ ಕಾಲಘಟ್ಟದಲ್ಲಿ ತಳೆಯಬೇಕಾದ ನಿಲುವನ್ನು ಇಸ್ಲಾಮೀ ಸಂಘಟನೆಯನ್ನು ರೂಪೀಕರಿಸಬೇಕು ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಭಾರತದಲ್ಲಿರುವ ಇಪ್ಪತ್ತು ಕೋಟಿ ಗಿಂತಲೂ ಅಧಿಕವಿರುವ ಅಲ್ಪಸಂಖ್ಯಾತ ವಿಭಾಗದ ನೆಲೆ ನಿಲ್ಲುವಿಕೆ, ಬದುಕಿಗೆ ಆಧಾರದ ಭರವಸೆ ನೀಡುವ ಪ್ರಭಾವ, ಸಾಮರ್ಥ್ಯ ಇಸ್ಲಾಮೀ ಸಂಘಟನೆಗೆ ಇದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕಾಗಬಹುದು.

ಸ್ವಾತಂತ್ರ್ಯ ಪೂರ್ವದ ಭಾರತದ ಪರಿಸ್ಥಿತಿಯನ್ನು ಮಂದಿರಿಸಿಕೊಂಡು ರಚಿಸಲಾದ ಒಂದು ಸಿದ್ಧಾಂತದಲ್ಲಿ ಹೊಸ ಹಿಂದುತ್ವ ಭಾರತದ ಪ್ರಸಕ್ತ ಸ್ಥಿತಿಗತಿಯನ್ನು ನೋಡಿಕೊಂಡು ಒಂದು ವಿವೇಕತನದ ತಜ್ದೀದ್‌ಗಾಗಿ ಮುಜದ್ದಿದ್‌ಗಳು ಮುಂದೆ ಬರಬೇಕಾದ ಅಗತ್ಯವಿದೆ. ಆ ಧೈರ್ಯ ತೋರಲು ಆಗುವುದಿಲ್ಲವೆಂದಾದರೆ ಸಿದ್ಧಾಂತ ಹಿಂದೆಯೂ ಸಂಘಟನೆ ಮುಂದೆಯೂ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ತಳೆದ ನಿಲುವುಗಳ ವಿಚಾರದಲ್ಲಿ ಇಸ್ಲಾಮೀ ಸಂಘಟನೆಗಳು ಸಾಂದರ್ಭಿಕವಾಗಿ ಎಷ್ಟು ಮುಂದುವರಿಯಲು ಸಾಧ್ಯವಾಯಿತು ಎಂಬ ವಿಚಾರವೂ ಪ್ರಸ್ತುತವಾಗಿದೆ.

ಒಂದು ಕಾಲದಲ್ಲಿ ಬಾರೀ ಪ್ರಭಾವ ಹೊಂದಿದ್ದ ಸಂಘಟನೆಯು ಹಿಂದುಳಿಯಲು ಕಾರಣವೇನು? ಬಾಂಗ್ಲಾದಲ್ಲಿ ಭಾರೀ ಪ್ರಗತಿ ಸಾಧಿಸಿದ ಸಂಘಟನೆಯನ್ನು ಪ್ರಸ್ತುತ ಅಧಿಕಾರರೂಢ ಸರಕಾರವು ಸಂಪೂರ್ಣ ನಾಶಗೊಳಿಸಲು ಪ್ರಯತ್ನಿಸುತ್ತಿರುವಾಗ ಅದನ್ನು ಎದುರಿಸಲು ಸಂಘಟನೆಯು ಕಂಡುಕೊಂಡ ಮಾರ್ಗ ಯಾವುದು ಮುಂತಾದ ಪ್ರಶ್ನೆಗಳು ಬಾಕಿಯುಳಿದಿದೆ.

ಹೊಸ ಕಾಲದಲ್ಲಿ ಇಸ್ಲಾಮೀ ಸಂಘಟನೆಯ ಸಿದ್ಧಾಂತದಲ್ಲಿ ತಜ್ದೀದ್ ಹೇಗೆ ಮಾಡಬೇಕೆಂಬುದು ಈ ಲೇಖನಗಳ ಯೋಜನೆಯಲ್ಲ. ಪ್ರಸಕ್ತ ಕಾಲಘಟ್ಟದಲ್ಲಿ ತಜ್ದೀದ್‌ನ ಅನಿವಾರ್ಯತೆಯನ್ನು ಒಪ್ಪಿಕೊಂಡು ಆ ವಿಷಯದಲ್ಲಿ ಚರ್ಚೆಗೆ ಮುಂದಾಗಬೇಕೆಂದಾಗಿದೆ.

ನಮ್ಮ ದೇಶದ ಪ್ರಸಕ್ತ ವ್ಯವಸ್ಥೆಯಲ್ಲಿ ನಾವು ಕೈಗೊಳ್ಳಬೇಕಾದ ನಿಲುವು, ಬಹುಸಂಸ್ಕೃತಿಯ ಸಮಾಜದಲ್ಲಿ ಇಸ್ಲಾ ಮನ್ನು ಪ್ರತಿನಿಧಿಸುವ ವಿಧಾನ ಹೇಗೆ? ಇತರ ಧರ್ಮೀಯರ ನಡುವೆ ಇಸ್ಲಾಮೀ ಸಂದೇಶ ಪ್ರಚಾರ ನಿರ್ವಹಿಸುವ ರೀತಿ; ಇತರ ಮುಸ್ಲಿಮ್ ಸಂಘಟನೆ, ಒಕ್ಕೂಟದೊಂದಿಗೆ ವರ್ತಿಸುವ ರೀತಿ; ಆಡಳಿತದೊಂದಿಗೆ ಮತ್ತು ಇತರ ರಾಜಕೀಯ ಪಕ್ಷಗಳ ಜೊತೆಗಿನ ಸಂಬಂಧಗಳು; ಮುಸ್ಲಿಮ್ ಅಲ್ಪಸಂಖ್ಯಾತರಿರುವ ದೇಶದಲ್ಲಿ, ಬಹು ಸಂಸ್ಕೃತಿಯ ಸಮಾಜದಲ್ಲಿ ಇಸ್ಲಾಮೀ ರಾಜಕೀಯದ ಧೋರಣೆ ಮುಂತಾದ ಮೌಲ್ಯಯುತವಾದ ಹಲವು ವಿಚಾರಗಳಲ್ಲಿ ಕಳೆದ ಶತಮಾನದಲ್ಲಿ ದಾಖಲಿಸಿದ ಅಕ್ಷರಗಳಿಗೆ ಸೀಮಿತವಾಗದೆ ತಜ್ದೀದ್‌ಗೆ ಹೆಚ್ಚು ಉತ್ಸಾಹ ತೋರಿದರೆ ಮಾತ್ರ ಸಂಘಟನೆಗಳು ಯಥಾವತ್ತಾಗಿ ಇಸ್ಲಾಮೀ ಆಂದೋಲನವಾಗಿ ಮುಂದುವರಿಯಬಹುದು. ಇಲ್ಲದಿದ್ದರೆ ಇಸ್ಲಾಮೀ ಸಂಘಟನೆಗಳ ಚಟುವಟಿಕೆಗಳು ಪ್ರವಾದಿ ಮೂಸಾ(ಅ) ಬಂದು ಪ್ರವಾದಿ ಲೂತ್(ಅ)ರ ಜೊತೆ ಮಾತನಾಡಿದಂತೆ ರೀತಿಯಲ್ಲಿ ಅಸಂಬದ್ಧವಾಗಬಹುದು.
[ಸಶೇಷ]