ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ “ಟ್ಯಾಲೆಂಟ್ ಹಂಟ್ 23”

0
165

ಸನ್ಮಾರ್ಗ ವಾರ್ತೆ

ಪಕ್ಕಲಡ್ಕ : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕದ ವತಿಯಿಂದ ಮಕ್ಕಳಿಗಾಗಿ “ಟ್ಯಾಲೆಂಟ್ ಹಂಟ್ 23” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ಕೌಶಲ್ಯಗಳನ್ನು ಪ್ರದರ್ಶಿಸಲು ಇದೊಂದು ಅವಕಾಶವಾಗಿತ್ತು. ಆ ಮೂಲಕ ಅವರನ್ನು ಪ್ರೋತ್ಸಾಹಿಸಲು ವಿಭಿನ್ನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಹಲವಾರು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು, ಕ್ಲೇ ಮೋಲ್ಡಿಂಗ್, ಫ್ಯಾನ್ಸಿ ಡ್ರೆಸ್, ಹೂವಿನ ರಂಗೋಲಿ, ಧಾನ್ಯ ಕಲೆ, ಗ್ರೀಟಿಂಗ್ ಕಾರ್ಡ್ ತಯಾರಿಕೆ, ಮೆಹಂದಿ, ಕೃತಕ ಹೂವಿನ ಬೊಕೆ, ಸಲಾಡ್ ತಯಾರಿಕೆ, ಮ್ಯಾಟ್ ತಯಾರಿಕೆ, ಮಿಮಿಕ್ರಿ, ಕಸದಿಂದ ರಸ, ಮೊನೊ ಆಕ್ಟ್, ಸೈನ್ಸ್ ಹೋಲಿಕ್, ಪೆನ್ಸಿಲ್ ಸ್ಕೆಚ್, ಹೆನ್ನಾ, ಸೈನ್ಸ್ ಮೋಲ್ಡಿಂಗ್, ಕ್ಯಾಲಿಗ್ರಫಿ. ಹಾಗೂ ಮಕ್ಕಳಿಗಾಗಿ ಮೈಂಡ್ ಗೇಮ್ ಗಳನ್ನು ಆಯೋಜಿಸಲಾಯಿತು.

ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿದರು. ಟ್ಯಾಲೆಂಟ್ ಹಬ್ 23 ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಖುರೇಶಾ ನುಶ್ರತ್ ಶಿಕ್ಷಕಿಯರಾದ ಶ್ರೀಮತಿ ನಾಗರತ್ನ, ಪಾವನ, ಅಧ್ಯಾಪಕರಾದ ಅಬ್ದುಲ್ಲಾ ಫೈರೋಝ್ ನದ್ವಿ, ಅಶೀರುದ್ದೀನ್ ಮಾಸ್ಟರ್ ಸಾರ್ತಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.