ಅವಣಿಯಪುರಂ: ಜಲ್ಲಿಕಟ್ಟಿಗೆ ಯುವಕ ಬಲಿ, ಹಲವರಿಗೆ ಗಾಯ

0
400

ಸನ್ಮಾರ್ಗ ವಾರ್ತೆ

ಮಧುರೆ: ತಮಿಳ್ನಾಡಿನ ಅವಣಿಯಪುರಂ‌ನಲ್ಲಿ ನಡೆದ ಜಲ್ಲಿಕಟ್ಟು ವೇಳೆ ಹೋರಿಯ ದಾಳಿಗೆ ಹತ್ತೊಂಬತ್ತು ವರ್ಷದ ಯುವಕ ಬಾಲಮುರುಗನ್ ಎಂಬಾತ ಮೃತಪಟ್ಟಿದ್ದಾನೆ. ಹೋರಿಯ ಕೊಂಬು ಯುವನ ಎದೆಯೊಳಗೆ ತಾಗಿತ್ತು. ಈ ಜಲ್ಲಿಕಟ್ಟಿನಲ್ಲಿ 80 ಮಂದಿ ಗಾಯಗೊಂಡಿದ್ದಾರೆ.

ಜಲ್ಲಿ ಕಟ್ಟು ಸ್ಪರ್ಧೆಯ ವೇಳೆ ಜನಸಂದಣಿಯ ನೂಕುನುಗ್ಗಲಿನಲ್ಲಿ ಯುವಕ ಕಳಗೆ ಬಿದ್ದಿದ್ದು ಇದೇ ವೇಳೆ ಹೋರಿಯು ದಾಳಿ ನಡೆಸಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಜೀವ ರಕ್ಷಿಸಲಾಗಲಿಲ್ಲ. ಕೊರೋನ ಪರಿಸ್ಥಿತಿಯಲ್ಲಿ ನೋಡುಗರ ಸಂಖ್ಯೆ ಪರಿಮಿತವಾಗಿದೆ. ಆದರೆ ಸ್ಪರ್ಧೆಯ ವೇದಿಕೆಯ ಹೊರಗೆ ಹಲವು ಜನರು ಇದ್ದರು. ಮಾಸ್ಕ್ ಧರಿಸದೆಯೂ ಸಾಮಾಜಿಕ ಅಂತರವನ್ನು ಪಾಲಿಸದೆ ಜನರು ಗುಂಪುಗೂಡಿದ್ದರು.

ಶುಕ್ರವಾರ ಬೆಳಗ್ಗೆ ಏಳೂವರೆಗೆ ಸ್ಪರ್ಧೆ ಆರಂಭವಾಗಿತ್ತು. ಸಚಿವ ಪಳನಿವೇಲ್ ತ್ಯಾರಾಜನ್.ಪಿ.ಮೂರ್ತಿ, ಮಧುರೆ ಎಂಪಿಎಸ್ ವೆಂಕಟೇಶನ್ ಜಿಲ್ಲಾಧಿಕಾರಿ ಎಸ್ ಅನೀಶ್ ಶೇಖರ್ ಅತಿಥಿಯಾಗಿದ್ದರು. ಏಳನೆ ಸುತ್ತಿನಲ್ಲಿ 652 ಹೋರಿಗಳೂ 294 ಜನರು ಭಾಗವಹಿಸಿದ್ದರು. ಕೊರೋನ ಸೋಂಕಿತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಲಾಗಿತ್ತು. ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಇದ್ದವರಿಗೆ ಮಾತ್ರ ಅನುಮತಿ ನೀಡಲಾಗುತ್ತಿತ್ತು.