ರೋಹಿಂಗ್ಯನರ ಜನಾಂಗೀಯ ಹತ್ಯೆ ಪ್ರಕರಣ: ವಿಚಾರಣಾ ದಿನಾಂಕ ಘೋಷಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ

0
907

ಸನ್ಮಾರ್ಗ ವಾರ್ತೆ

ಹೇಗ್: ರೋಹಿಂಗ್ಯನ್ ಮುಸ್ಲಿಮರ ಸಾಮೂಹಿಕ ಹತ್ಯೆ ಪ್ರಕರಣದ ವಿಚಾರಣೆಗೆ ಅಂತಾರಾಷ್ಟ್ರೀಯ ಕೋರ್ಟು ಫೆಬ್ರುವರಿ 21ನ್ನು ನಿಗದಿಗೊಳಿಸಿದ್ದು, ಅಲ್ಲಿಂದ ನಿರಂತರ ವಿಚಾರಣೆ ನಡೆಯಲಿದೆ. ಈಗಿನ ಸೈನಿಕ ಆಡಳಿತದ ಪ್ರತಿನಿಧಿಗಳು ವಿಚಾರಣೆಗೆ ಬರಬೇಕಾಗಿದೆ.
ಗಾಂಬಿಯದ ಅಟಾರ್ನಿ ಜನರಲ್ ಪಶ್ಚಿಮ ಆಫ್ರಿಕದವರಾದ ಜನರಲ್ ಜೌಡ ಜಾಲೌ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಕೇಸು ದಾಖಲಿಸಲಾಗಿದ್ದು, ಹೈಬ್ರಿಡ್ ಹಿಯರಿಂಗ್ ನಡೆಯಲಿದೆ. ಕೊರೋನ ಇರುವುದರಿಂದ ಕೆಲವರು ನೇರವಾಗಿ ವಿಚಾರಣೆಗೆ ಬರಬೇಕಾಗಿಲ್ಲ ಎಂಬುದಾಗಿ ತಿಳಿಸಲಾಗಿದ್ದು, ಆನ್‍ಲೈನ್‍ನ ಮೂಲಕ ಹೈಬ್ರಿಡ್ ಹಿಯರಿಂಗ್‌ನಲ್ಲಿ ಭಾಗವಹಿಸಲು ತಿಳಿಸಲಾಗಿದೆ.

2019ರಲ್ಲಿ ಅಂದಿನ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ, ಕೇಸು ವಜಾಮಾಡಬೇಕೆಂದು ಹೇಗ್ ಕೋರ್ಟಿನ ಮೊರೆ ಹೋಗಿದ್ದರು. 2021ರಲ್ಲಿ ಸೇನೆ ಸೂಕಿಯನ್ನು ಹೊರದಬ್ಬಿ ಅಧಿಕಾರವನ್ನು ವಹಿಸಿಕೊಂಡಿದೆ. ಅದರ ಬೆನ್ನಿಗೆ ಅವರನ್ನು ಜೈಲಿಗೆ ತಳ್ಳಲಾಗಿದ್ದು ಆರು ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಸೂಕಿ ವಿರುದ್ಧ ಐದು ಹೊಸ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಹೆಲಿಕಾಪ್ಟರ್ ಖರೀದಿ ಭ್ರಷ್ಟಾಚಾರವೂ ಅದರಲ್ಲಿ ಸೇರಿದೆ. 2017ರ ಸೈನಿಕ ಬುಡಮೇಲಿನ ನಂತರ ಏಳು ಲಕ್ಷಕ್ಕೂ ಹೆಚ್ಚು ರೋಹಿಂಗ್ಯನ್ ಮುಸ್ಲಿಮರನ್ನು ಮ್ಯಾನ್ಮಾರಿನಿಂದ ಬಡಿದೋಡಿಸಲಾಗಿತ್ತು.ಈ ಸಂದರ್ಭದಲ್ಲಿ ರೋಹಿಂಗ್ಯನ್ನರ ಹತ್ಯೆ ನಡೆದಿತ್ತು. ಅವರೀಗ ನಿರಾಶ್ರಿತರಾಗಿ ಬಾಂಗ್ಲಾದೇಶದಲ್ಲಿದ್ದಾರೆ.