ತೇಜಸ್ವಿ ಒಳ್ಳೆಯ ಹುಡುಗ: ಸ್ವಲ್ಪ ವಯಸ್ಸಾದಾಗ ಅಧಿಕಾರದ ಚುಕ್ಕಾಣಿ ಹಿಡಿಯಬಹುದು- ಉಮಾ ಭಾರತಿ

0
481

ಸನ್ಮಾರ್ಗ ವಾರ್ತೆ

ಭೋಪಾಲ,ನ.12: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‍ರನ್ನು ಬಿಜೆಪಿ ನಾಯಕಿ ಉಮಾ ಭಾರತಿ ಪ್ರಶಂಸಿಸಿದ್ದಾರೆ. ತೇಜಸ್ವಿಯ ವಯಸ್ಸನ್ನು ಲೆಕ್ಕ ಮಾಡುವಾಗ ಒಂದು ರಾಜ್ಯವನ್ನು ಮುನ್ನಡೆಸುವಷ್ಟು ಅನುಭವವಿಲ್ಲ. ಕೊನೆಯದಾಗಿ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಚುಕ್ಕಾಣಿ ಹಿಡಿಯಬಹುದಿತ್ತು ಎಂದು ಅವರು ಹೇಳಿದರು.

ತೇಜಸ್ವಿ ಒಳ್ಳೆಯ ಹುಡುಗ ರಾಜ್ಯವನ್ನು ಮುನ್ನಡೆಸುವ ಅನುಭವ ಇಲ್ಲದ್ದರಿಂದ ಬಿಹಾರ ಹಲ್ಲುಗಳೆಡೆ ಚರ್ಮದ ವ್ಯತ್ಯಾಸದಲ್ಲಿ ಪಾರಾಯಿತು. ಲಾಲು ಬಿಹಾರದಲ್ಲಿ ಜಂಗಲ್ ರಾಜ್‍ಗೆ ದೂಡಿ ಹಾಕಿದ್ದರು. ಸ್ವಲ್ಪ ವಯಸ್ಸಾಗುವಾಗ ತೇಜಸ್ವಿಗೆ ಬಿಹಾರವನ್ನು ಮುನ್ನಡೆಸಲು ಆಗಬಹುದು ಎಂದು ಭೋಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಾ ಉಮಾ ಭಾರತಿ ಹೇಳಿದರು.

ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಬಗ್ಗೆಯೂ ಉಮಾ ಭಾರತಿ ಮಾತಾಡಿದರು. ಕಮಲ್‍ನಾಥ್ ಗೌರವಾನ್ವಿತರು ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ ಹೋರಾಡಿದರು. ಸರಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದರೆ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಿರಲಿಲ್ಲ. ನನ್ನ ಹಿರಿಯ ಸಹೋದರನಂತೆ ಅವರು ತುಂಬ ಗೌರವಾನ್ವಿತರು. ಅವರು ಚುನಾವಣೆಯನ್ನು ತುಂಬ ತಂತ್ರ ಪರವಾಗಿ ಎದುರಿಸಿದರು ಎಂದು ಉಮಾ ಭಾರತಿ ಹೇಳಿದರು.

ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ ಎಂಟು ಶಾಸಕ ಸ್ಥಾನಗಳು ಬೇಕಾಗಿತ್ತು. ಬಿಜೆಪಿ 19 ಕಡೆ ಗೆದ್ದಿದೆ. ಕಾಂಗ್ರೆಸ್ ಒಂಬತ್ತು ಕಡೆ ಗೆದ್ದಿದೆ. ಜ್ಯೋತಿರಾದಿತ್ಯ ಬಣದ 25 ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್‍ನ ಕಮಲನಾಥ್ ಸರಕಾರ ಪತನವಾಗಿತ್ತು.