ಅಯೋಧ್ಯೆಯಂತೆ ಕಾಶೀ, ಮಥುರಾದಲ್ಲಿರುವ ಮಸೀದಿಗಳನ್ನು ನೆಲಸಮಗೊಳಿಸಬೇಕು: ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

0
952

ಸನ್ಮಾರ್ಗ ವಾರ್ತೆ

ಶಿವಮೊಗ್ಗ,ಆ.5:ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಾರ್ಥಿಸಲು ಹೋಮ ಆಯೋಜಿಸಿದ್ದ ನಗರದ ಶ್ರೀ ಸೀತಾರಾಮಂಜನೇಯ ದೇವಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

“ಅಯೋಧ್ಯೆಯ ಮಸೀದಿಯನ್ನು ನೆಲಸಮಗೊಳಿಸಬೇಕು ಮತ್ತು ರಾಮ ಮಂದಿರವನ್ನು ನಿರ್ಮಿಸಬೇಕು ಎಂಬುದು ಬಹುಸಂಖ್ಯಾತ ಹಿಂದೂಗಳ ಆಶಯವಾಗಿತ್ತು. ಇಂದು ನಮ್ಮ ಕನಸು ನನಸಾಗಿದೆ. ಅದೇ ರೀತಿ ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಶ್ರೀ ಸೀತಾರಾಮಂಜನೇಯ ದೇವಸ್ಥಾನದಲ್ಲಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್‌ನಿಂದ ರಾಮ ತಾರಕ್ ಹೋಮವನ್ನು ಆಯೋಜಿಸಿದ ಸಂದರ್ಭದಲ್ಲಿ ಈಶ್ವರಪ್ಪ ಮಾತನಾಡಿ, ಅಯೋಧ್ಯೆಯ ಭೂಮಿ ಪೂಜೆಯನ್ನು ಯಾವುದೇ ವಿಕಸನಗಳಿಲ್ಲದೇ ಯಶಸ್ವಿಯಾಗಿ ನಡೆಸಬೇಕೆಂದು ಪ್ರಾರ್ಥಿಸಿದರು.

“ನಾವು ಭಗವಂತನ ದರ್ಶನ ಪಡೆಯಲು ಕಾಶಿ ಮತ್ತು ಮಥುರಾಕ್ಕೆ ಹೋದಾಗ, ನಾವು ಗುಲಾಮರಾದಂತೆ ಭಾಸವಾಗುತ್ತೇವೆ. ಇದಕ್ಕೆ ಕಾರಣವೆಂದರೆ ದೇವಾಲಯದ ಪಕ್ಕದಲ್ಲಿಯೇ ಮಸೀದಿ ಇರುವುದು. ಅದಕ್ಕಾಗಿಯೇ ಭಕ್ತರು ಆ ದೇವಾಲಯಗಳಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಲಾಂಛನವಾಗಿದ್ದ ಮಸೀದಿಯನ್ನು ನೆಲಸಮ ಮಾಡಲಾಯಿತು. ಅದೇ ರೀತಿ ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು.” ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.