ಭಯೋತ್ಪಾದನೆ ಎಲ್ಲಿ ನಡೆದರು, ಅದರ ಕಾರಣ ಏನೇ ಇದ್ದರು ಅದು ಅಮಾನವೀಯವಾಗಿದೆ: ಪ್ರಧಾನಿ ನರೇಂದ್ರ ಮೋದಿ

0
526

ಸನ್ಮಾರ್ಗ ವಾರ್ತೆ

ನವದೆಹಲಿ: ಘರ್ಷಣೆ ಎಲ್ಲಿ ನಡೆದರೂ ಯಾರಿಗೂ ಲಾಭ ಇಲ್ಲ. ಮಾನವೀಯ ನಿಲುವಿನೊಂದಿಗೆ ಜಗತ್ತು ಮುಂದೆ ಸಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 9ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು (ಪಿ20) ಉದ್ಘಾಟಿಸಿದ ಬಳಿಕ ಪ್ರಧಾನಿ ಮಾತನಾಡುತ್ತಿದ್ದರು.

“ಭಯೋತ್ಪಾದನೆ, ಅದು ಎಲ್ಲಿ ಸಂಭವಿಸಿದರೂ ಮತ್ತು ಯಾವುದೇ ಕಾರಣಕ್ಕೂ ಅದು ಮಾನವೀಯತೆಗೆ ವಿರುದ್ಧವಾಗಿದೆ” ಎಂದು ಪ್ರಧಾನಿ ಹೇಳಿದರು. ಭಯೋತ್ಪಾದನೆಯ ವ್ಯಾಖ್ಯೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕೂಡ ಏಕ ಅಭಿಪ್ರಾಯ ಇಲ್ಲ ಎಂದು ಮೋದಿ ಆರೋಪಿಸಿದರು.

ಭಾರತದ ಗಡಿಯುದ್ದಕ್ಕೂ ಭಯೋತ್ಪಾದನೆ ಎದುರಿಸುತ್ತಿದೆ. 20 ವರ್ಷಗಳ ಹಿಂದೆ, ಸಂಸತ್ತಿನ ಅಧಿವೇಶನದ ವೇಳೆ ಉಗ್ರರು ದಾಳಿ ನಡೆಸಿದ್ದರು. ಸಂಸದರನ್ನು ಒತ್ತೆಯಾಳಾಗಿ ಇಡುವ ಯೋಜನೆ ರೂಪಿಸಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಬಹುಮುಂದೆ ಸಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ಒಂದುಗೂಡಿ ಕಾರ್ಯರೂಪಕ್ಕೆ ತರಬೇಕೆಂದು ಜಗತ್ತಿನ ಪಾರ್ಲಿಮೆಂಟುಗಳು ಮತ್ತು ಅದರ ಪ್ರತಿನಿಧಿಗಳು ಚಿಂತನೆ ನಡೆಸಬೇಕೆಂದು ಪ್ರಧಾನಿ ಹೇಳಿದರು.

ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಕುರಿತು ಅವರು ಮಾತಾಡಿದರು. ಸಾರ್ವತ್ರಿಕ ಚುನಾವಣೆ ಭಾರತದಲ್ಲಿ ಅತೀ ದೊಡ್ಡ ಉತ್ಸವವಾಗಿದೆ. 100 ಕೋಟಿ ಮತದಾರರು ತಮ್ಮ ಮತ ಚಲಾಯಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಮುಂದಿನ ವರ್ಷ ನಡೆಯುವ ಚುನಾವಣೆ ನೋಡಲು ನಾವು ನಿಮ್ಮ ಆಹ್ವಾನಿಸುತ್ತೇವೆ ಎಂದು ಅವರು ಪ್ರತಿನಿಧಿಗಳಿಗೆ ಹೇಳಿದರು.

https://x.com/ANI/status/1712719782552977642?s=20