ಭೂಕುಸಿತದಿಂದ ತಾಯಿ, ಪತ್ನಿ-ಮಗುವನ್ನು ಕಳೆದುಕೊಂಡ ಶರತ್‌ಗೆ ಶಿಹಾಬ್ ತಂಙಳ್ ಕುಟುಂಬದಿಂದ ನೂತನ ಮನೆ ಹಸ್ತಾಂತರ

0
800

ಸನ್ಮಾರ್ಗ ವಾರ್ತೆ

ಕೋಝೀಕೋಡ್,ಜೂ.11: ಕಳೆದ ವರ್ಷ ಆಗಸ್ಟ್‌ನಲ್ಲಿ ಇಲ್ಲಿನ ಕೊಟ್ಟಕ್ಕುನ್ನು ಎಂಬಲ್ಲಿ ನಡೆದ ಭೂಕುಸಿತದಲ್ಲಿ ಕುಟುಂಬ ಮತ್ತು ಮನೆಯನ್ನು ಕಳೆದುಕೊಂಡಿರುವ ಶರತ್‌ಗೆ ಪಾನಕ್ಕಾಡ್‌ನ ಪ್ರಸಿದ್ಧ ಶಿಹಾಬ್ ತಂಙಳ್ ಕುಟುಂಬವು ಬುಧವಾರನೂತನ ಮನೆಯನ್ನು ಹಸ್ತಾಂತರಿಸಿತು.

ಶಿಹಾಬ್ ಕುಟುಂಬವು ಪನಕ್ಕಾಡ್ ಬಳಿಯ ಪಟ್ಟಾರ್ಕಡವಿನಲ್ಲಿ ನಿರ್ಮಿಸಿದ ಮನೆಯು ‘ಧಾರ್ಮಿಕ ಭಿನ್ನತೆಗಳಿಗಿಂತ ಮಾನವೀಯತೆಯೇ ಮೇಲು’ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು. ಕುಟುಂಬದ ಮುಖ್ಯಸ್ಥ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್, ಮನೆಯ ಕೀಲಿಯನ್ನು ಶರತ್‌ಗೆ ಹಸ್ತಾಂತರಿಸಿದರು. ದೀಪ ಬೆಳಗಿಸಿ ಹೊಸ ಮನೆಗೆ ಶರತ್ ಪ್ರವೇಶಿಸಿದರು.

2019 ರ ವಿನಾಶಕಾರಿ ಪ್ರವಾಹದ ಸಂದರ್ಭದಲ್ಲಿ ತಾಯಿಯ ಕೈ ಹಿಡಿದು ಜೀವನಕ್ಕಾಗಿ ಓಡುವ ವಿಡಿಯೋ ಮುಖ್ಯವಾಹಿನಿಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಶರತ್ ಅವರ ಕಣ್ಣಲ್ಲಿ ಸಂತೋಷ ಮತ್ತು ಕೃತಜ್ಞತೆಯ ಕಣ್ಣೀರು ಸುರಿಸಿತು. ಅವರ ತಾಯಿ ಸರೋಜಿನಿ, ಪತ್ನಿ ಗೀತು ಮತ್ತು ಒಂದೂವರೆ ವರ್ಷದ ಮಗ ಧುರ್ವನ್‌ ಭೂಕುಸಿತದಲ್ಲಿ ಜೀವಂತವಾಗಿ ಹೂಳಲ್ಪಟ್ಟಿದ್ದರು.

ತದನಂತರ, ಶರತ್‌ರವರು ಮಂಜೆರಿ ಬಳಿಯ ನೆಲ್ಲಿಕುತ್ತು ಎಂಬಲ್ಲಿರುವ ತಮ್ಮ ತಾಯಿಯ ಮನೆಯಲ್ಲಿ ತಂಗಿದ್ದರಿಂದ ನಷ್ಟದ ಆಘಾತದಿಂದ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಯಿತು. ಸಯ್ಯದ್ ಶಿಹಾಬ್ ಕುಟುಂಬವು ಅವರ ಸಹಾಯಕ್ಕೆ ಮುಂದಾಯಿತಲ್ಲದೇ, ಲೋಕೋಪಕಾರಿ ಆರಿಫ್ ಕಲಪ್ಪದನ್ ದಾನ ಮಾಡಿದ ಜಾಗದಲ್ಲಿ 900 ಚದರ ಅಡಿ ವಿಸ್ತೀರ್ಣದ ಕಾಂಕ್ರೀಟ್ ಮನೆಯನ್ನು ನಿರ್ಮಿಸಿತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.