ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರೈತರ ಹೋರಾಟದ ಕುರಿತು ಚರ್ಚಿಸುವ ಹಕ್ಕು ಬ್ರಿಟಿಷ್ ಪಾರ್ಲಿಮೆಂಟಿಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಭಾರತಕ್ಕೆ ಇರುವಷ್ಟೇ ಚರ್ಚಿಸುವ ಹಕ್ಕು ಬ್ರಿಟಿಷ್ ಪಾರ್ಲಿಮೆಂಟಿಗೂ ಇದೆ ಎಂದು ತರೂರ್ ಹೇಳಿದರು.
ಹಿಂದೆ ಫೆಲಸ್ತೀನ್-ಇಸ್ರೇಲ್ ಸಮಸ್ಯೆಯಲ್ಲಿ ಭಾರತ ಚರ್ಚಿಸಿತ್ತು. ಇನ್ನೊಂದು ದೇಶದ ಆಂತರಿಕ ವಿಷಯ ಚರ್ಚಿಸಲು ಭಾರತಕ್ಕಿರುವ ಅದೇ ಹಕ್ಕು ಬ್ರಿಟಿಷ್ ಪಾರ್ಲಿಮೆಂಟಿಗೂ ಇದೆ. ಸ್ವಂತ ಅಭಿಪ್ರಾಯ ಹೇಳಿದ್ದಕ್ಕೆ ಕೇಂದ್ರ ಸರಕಾರದ ವಿರುದ್ಧ ಹೇಳುವುದಿಲ್ಲ. ಆದರೆ, ಇನ್ನೊಂದು ಕೋನವೂ ಇದೆ ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ತಮ್ಮ ಅಭಿಪ್ರಾಯ ಹೇಳುವ ಹಕ್ಕು ಇದೆ ಎಂದು ತರೂರು ಹೇಳಿದರು.
ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟ್ ಚರ್ಚಿಸಿದಾಗ ಬ್ರಿಟಿಷ್ ಹೈಕಮಿಶನರ್ರನ್ನು ಕರೆಯಿಸಿತ್ತು. ನಂತರ ವಿದೇಶ ಸಚಿವಾಲಯ ಲಂಡನಿನ ಭಾರತ ಹೈಕಮಿಶನ್ ರೂಕ್ಷವಾಗಿ ಪ್ರತಿಕ್ರಿಯಿಸಿತ್ತು.
ಮೂಲಭೂತವಾದ ವಿಷಯಗಳಲ್ಲಿ ಸಾಕ್ಷ್ಯಗಳೂ ಇಲ್ಲದೆ ತಪ್ಪಾದ ಹಕ್ಕುವಾದಗಳನ್ನು ಎತ್ತಿರುವುದು ಖಂಡನೀಯ ಎಂದು ಲಂಡನಿನ ಭಾರತದ ದೂತವಾಸ ಹೇಳಿತ್ತು. ಭಾರತದ ಮಾಧ್ಯಮ ಸ್ವಾತಂತ್ರ್ಯ ಕೊರತೆ ಅನುಭವಿಸುತ್ತಿದೆ ಎಂಬ ವಿಷಯದಲ್ಲಿಯೂ ಭಾರತ ದೂತವಾಸ ಅಂತಹ ವಿಚಾರದಲ್ಲಿ ಭಾರತದಲ್ಲಿಲ್ಲ ಎಂದು ಹೇಳಿತ್ತು. ಭಾರತೀಯ ವಂಶದ ಲಿಬರಲ್ ಡೆಮಕ್ರಾಟಿಕ್ ಪಾರ್ಟಿ ನಾಯಕ ಗುರ್ಚ ಸಿಂಗ್ ಸಲ್ಲಿಸಿದ ಮನವಿಯ ಆಧಾರದಲ್ಲಿ 90 ನಿಮಿರ್ಷಗಳ ಚರ್ಚೆಯು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಡೆದಿತ್ತು.












