ಸನ್ಮಾರ್ಗ ವಾರ್ತೆ
ಪಾಲಕ್ಕಾಡ್: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸಿಪಿಐ ಸಾಂಸ್ಕೃತಿಕ ಸಂಘಟನಾ ಯುವಕಲಾ ಸಾಹಿತಿಯ ರಾಜ್ಯ ಕಾರ್ಯದರ್ಶಿ ಎಪಿ ಅಹ್ಮದ್ ಮಾಸ್ಟರ್ ಪಟ್ಟಾಂಬಿಯಲ್ಲಿ ನಡೆದ ಹಿಂದೂ ಐಕ್ಯವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
‘ಕೇರಳ ತಾಲಿಬಾನಿನೆಡೆಗೊ’ ಎಂಬ ಸಂವಾದ ಕಾರ್ಯಕ್ರಮವನ್ನು ಹಿಂದೂ ಐಕ್ಯವೇದಿ ಪಟ್ಟಾಂಬಿಯಲ್ಲಿ ಆಯೋಜಿಸಿತ್ತು. ಹಿಂದೂ ಐಕ್ಯವೇದಿಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ, ಕುರುಕ್ಷೇತ್ರ ಪ್ರಕಾಶನ್, ಕಾಭಾ ಸುರೇಂದ್ರನ್ ಸಹಿತ ಸಂಘಪರಿವಾರ ನಾಯಕರು ಸೆಮಿನಾರಿನಲ್ಲಿದ್ದರು. ಈ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಮಂಡನೆಯನ್ನು ಅಹ್ಮದ್ ಮಾಸ್ಟರ್ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಸಂವಾದದಲ್ಲಿ ರಾಜಕೀಯವಿಲ್ಲ ಎಂದು ಅಹ್ಮದ್ ಮಾಸ್ಟರ್ ಹೇಳಿದರು. ಶಿವಸೇನೆ ವೇದಿಕೆಯಲ್ಲಿ ಮುಸ್ಲಿಂ ಲೀಗ್ ನಾಯಕ ಎಂಕೆ ಮುನೀರ್, ಸೇವಾ ಭಾರತಿಯ ಕಾರ್ಯಕ್ರಮದಲ್ಲಿ ಕೆ.ಟಿ ಜಲೀಲ್ ಭಾಗವಹಿಸಿದ್ದರು ಎಂದು ಅಹ್ಮದ್ ಮಾಸ್ಟರ್ ನೆನಪಿಸಿದರು. ಈ ಹಿಂದೆ, ಪ್ರತಿಪಕ್ಷ ನಾಯಕ ವಿ.ಡಿ ಸತೀಶನ್, ಲೀಗ್ ನಾಯಕ ಕೆಎನ್ಎ ಖಾದರ್, ಸಿಪಿಎಂ ನಾಯಕಿ ಕೆ.ಕೆ ಶೈಲಜ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












