ರಾಜ್ಯದಲ್ಲಿ 744 ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಆರೋಪಿಗಳು- ಕೇರಳ ಸರಕಾರ

0
25

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ರಾಜ್ಯದಲ್ಲಿ 744 ಪೊಲೀಸ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಅಪರಾಧ ಕೃತ್ಯಗಳಲ್ಲಿ ಇಷ್ಟು ಮಂದಿಯ ವಿರುದ್ಧ ಕೇಸಿದೆ. 691 ಮಂದಿ ವಿರುದ್ಧ ಇಲಾಖಾ ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಕ್ರಿಮಿನಲ್ ಪ್ರಕರಣದ ಆರೋಪಿಗಳಾದ 18 ಪೊಲೀಸ್ ಅಧಿಕಾರಿಗಳನ್ನು ಮಾತ್ರ ಸೇವೆಯಿಂದ ಹೊರಹಾಕಲಾಗಿದೆ.

ಇತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತಿದೆ. ಅಪರಾಧ ಕೃತ್ಯವೆಸಗಿದ 744 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ದಾಖಲೆ ಹೇಳುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.ವಿಧಾನಭೆಯಲ್ಲಿ ಬಡಗರ ಶಾಸಕಿ ಕೆಕೆ ರಮಾರ ಪ್ರಶ್ನೆಗೆ ಮುಖ್ಯಮಂತ್ರಿ ಈ ರೀತಿ ಉತ್ತರಿಸಿದ್ದಾರೆ.

ಮನೆಯಲ್ಲಿ ಹಿಂಸೆ, ಗಡಿ ವಿವಾದ ಇತ್ಯಾದಿ ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಪೊಲೀಸರಿಂದ ಹಿಡಿದು ಕಸ್ಟಡಿ ಸಾವಿನವರೆಗಿನ ಕೇಸುಗಳು ಇದರಲ್ಲಿ ಸೇರಿವೆ. ಮೊಬೈಲ್ ಫೋನ್ ಕದ್ದವರು ಪಟ್ಟಿಯಲ್ಲಿದ್ದಾರೆ. ಕೇರಳದ ಪೊಲೀಸರು ಜನರೊಂದಿಗೆ ಕೆಟ್ಟದಾಗಿ ವರ್ತಿಸುವುದಾಗಿ ದೂರುಗಳಿದ್ದು ಇಂತಹ ಘಟಕಗಳ ಪುನರಾವರ್ತನೆ ಆಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಶಾಸಕಿ ವಿಧಾಸಭೆಯಲ್ಲಿ ಪ್ರಶ್ನೆ ಎತ್ತಿದ್ದರು.

LEAVE A REPLY

Please enter your comment!
Please enter your name here