ಡಿ.1 ರಿಂದ ಮತ್ತೆ ಆರಂಭವಾಗಲಿದೆ ಮಂಗಳೂರು ಜಂಕ್ಷನ್ – ವಿಜಯಪುರ ರೈಲು

0
26

ಸನ್ಮಾರ್ಗ ವಾರ್ತೆ

ಮಂಗಳೂರು: 2019 ರ ನವೆಂಬರ್‌ 12 ರಂದು ಉದ್ಘಾಟನೆಗೊಂಡು ಬಳಿಕ ಕೊರೋನದ ಹಿನ್ನೆಲೆಯಲ್ಲಿ 2020ರ ಮಾರ್ಚ್ 23 ರಿಂದ ಸ್ಥಗಿತಗೊಂಡಿದ್ದ ಬಹು ಬೇಡಿಕೆಯ ಮಂಗಳೂರು ಜಂಕ್ಷನ್-ವಿಜಯಪುರ (ಬಿಜಾಪುರ) ರೈಲಿನ ಸೇವೆಯು ಡಿ. 1 ರಿಂದ ಮತ್ತೆ ಆರಂಭವಾಗಲಿದೆ. ನೈಋತ್ಯ ರೈಲ್ವೆ ವಲಯವು ಈ ರೈಲಿನ ಆರಂಭದ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿದೆ.

ವಿಜಯಪುರದಿಂದ ಗಾಡಿ ಸಂಖ್ಯೆ 07377 ಡಿ. 1ರಿಂದ ಹಾಗೂ ಮಂಗಳೂರಿನಿಂದ ಗಾಡಿ ಸಂಖ್ಯೆ 07378 ರೈಲು ಡಿ. 2ರಂದು ಆರಂಭಗೊಳ್ಳಲಿದೆ. ರೈಲು 1 ಎಸಿ 3 ಟೈರ್, 6 ಸೆಕೆಂಡ್ ಕ್ಲಾಸ್ ಸ್ತ್ರೀಪರ್ ಬೋಗಿಗಳು, 5 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್/ಡಿಸೆಬಲ್ ಕೋಚ್‌ಗಳು ಸೇರಿದಂತೆ ಒಟ್ಟು 14 ಕೋಚ್‌ಗಳನ್ನು ಒಳಗೊಂಡಿದೆ.

ಪ್ರಕಟಿತ ವೇಳಾಪಟ್ಟಿಯಂತೆ ರೈಲು ಸಂಜೆ 6.15ಕ್ಕೆ ವಿಜಯಪುರದಿಂದ ಹೊರಟು ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ರೈಲು ತಲುಪಲಿದೆ. ಸಂಜೆ.4.45ಕ್ಕೆ ಮಂಗಳೂರಿನಿಂದ ನಿರ್ಗಮಿಸಿ ಮರುದಿನ ಬೆಳಗ್ಗೆ 10.40ಕ್ಕೆ ವಿಜಯಪುರ ತಲುಪುತ್ತದೆ.

ರೈಲಿನ ವೇಳಾಪಟ್ಟಿ ಬಳಕೆದಾರರಿಗೆ ಅನುಕೂಲವಾದ ಸಮಯವಲ್ಲ. ಆದುದರಿಂದ ಇದನ್ನು ಬದಲಾಯಿಸಿ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಆಗಮಿಸಿ ಸಂಜೆ 5.30ಕ್ಕೆ ನಿರ್ಗಮಿಸುವಂತೆ ವೇಳಾಪಟ್ಟಿಯನ್ನು ರೂಪಿಸುವಂತೆ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ರೈಲ್ವೆ ಬಳಕೆದಾರರ ಸಂಘಟನೆಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದವು. ಆದರೆ ರೈಲ್ವೆ ಇಲಾಖೆಯಿಂದ ಪೂರಕ ಸ್ಪಂದನೆ ದೊರಕಿಲ್ಲ ಎಂದು ತಿಳಿದು ಬಂದಿದೆ.

ರೈಲಿನ ವೇಳಾಪಟ್ಟಿ ಈ ರೀತಿ ಇದೆ: (ಮಂಗಳೂರು ಜಂಕ್ಷನ್ ನಿಂದ- ಗಾಡಿ ಸಂಖ್ಯೆ 07378)

ಸಂಜೆ 4.45 PM – ಮಂಗಳೂರು ಜಂಕ್ಷನ್
5.15- ಬಂಟ್ವಾಳ (ಬಿ.ಸಿ. ರೋಡ್)
5. 43- ಕಬಕ-ಪುತ್ತೂರು
6.30 – ಸುಬ್ರಹ್ಮಣ್ಯ ರಸ್ತೆ
9.00- ಸಕಲೇಶಪುರ
10. 18- ಹಾಸನ
11.30- ಅರಸೀಕೆರೆ
ಮಧ್ಯರಾತ್ರಿ 12.08ಕ್ಕೆ- ಕಡೂರು
1.48- ದಾವಣಗೆರೆ
2.04- ಹರಿಹರ
2.26- ರಾಣಿಬೆನ್ನೂರು
2.45- ಬ್ಯಾಡಗಿ
3AM- ಹಾವೇರಿ
4. 50 ಎಸ್‌ಎಸ್‌ಎಸ್ ಹುಬ್ಬಳ್ಳಿ
ಬೆಳಗ್ಗೆ 6ಕ್ಕೆ ಗದಗ
7. 33- ಬಾದಾಮಿ
8.03ಕ್ಕೆ ಬಾಗಲಕೋಟೆ
8.44ಕ್ಕೆ ಅಲಮಟ್ಟಿ
9.06ಕ್ಕೆ ಬಸವನಬಾಗೇವಾಡಿ
10.40ಕ್ಕೆ ವಿಜಯಪುರ
————————-
ವಿಜಯಪುರದಿಂದ ನಿರ್ಗಮನ(ಗಾಡಿ ಸಂಖ್ಯೆ 07377)
ಸಂಜೆ 6.15 PM ಗಂಟೆಗೆ-ವಿಜಯಪುರ
6.52- ಬಸವನ ಬಾಗೇವಾಡಿ
7.10- ಆಲಮಟ್ಟಿ
7.48- ಬಾಗಲಕೋಟೆ
8. 17- ಬಾದಾಮಿ
10.05- ಗದಗ
11.40 ಎಸ್‌ಎಸ್‌ಎಸ್ ಹುಬ್ಬಳ್ಳಿ
ಮಧ್ಯರಾತ್ರಿ 1.10ಕ್ಕೆ ಹಾವೇರಿ
1.25- ಬ್ಯಾಡಗಿ
1.48- ರಾಣಿ ಬೆನ್ನೂರು
2.10- ಹರಿಹರ
2.28- ದಾವಣಗೆರೆ
4- ಕಡೂರು
4. 35- ಅರಸೀಕೆರೆ
5.20ಕ್ಕೆ ಹಾಸನ
6.25- ಸಕಲೇಶಪುರ
9. 20ಕ್ಕೆ- ಸುಬ್ರಹ್ಮಣ್ಯ ರಸ್ತೆ
10.20ಕ್ಕೆ ಕಬಕ-ಪುತ್ತೂರು
10.53- ಬಂಟ್ವಾಳ
12.40- ಮಂಗಳೂರು ಜಂಕ್ಷನ್

LEAVE A REPLY

Please enter your comment!
Please enter your name here