✍️ ಆಯಿಷಾ ಎಜಾಝ್ ಶಿವಮೊಗ್ಗ
ಡಿಸೆಂಬರ್ 23 ರಂದು ರೈತರ ದಿನವೆಂದು ಆಚರಣೆ ಮಾಡಲಾಗುತ್ತಿದೆ.
ಮಣ್ಣಿನ ಮಗ ದೇಶದ ಬೆನ್ನೆಲುಬು. ಕಾಣದ ಕೈಗಳಿಗೂ ಸಹ ಅನ್ನ ಕೊಡೊತ್ತಿರುವ ಅನ್ನದಾತ ಎಂದು ಕರೆಸಿಕೊಳ್ಳುತ್ತಿರುವ ರೈತರ ಸ್ಥಿತಿ ಇಂದು ಹದಗೆಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ ಇಂದು ನಾವು ದೇಶದೆಲ್ಲೆಡೆ ರೈತರ ದಿನವೆಂದು ಆಚರಿಸುತ್ತೇವೆ.
ಇದನ್ನು ಆಚರಿಸುವಂತಹ ಉದ್ದೇಶದ ರೈತರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಬೇಕು ಆತನಿಗೆ ಆತನ ಹಕ್ಕುಗಳು ಸಿಗಬೇಕು ಚಿನ್ನದ ಬದಲು ನಕಲಿ ಚಿನ್ನವನ್ನು ತಯಾರಿಸಬಹುದು ಚಿನ್ನವಿಲ್ಲದಿದ್ದರೆ ಜೀವನ ನಡೆಯುತ್ತೆ. ಚಿನ್ನವಿಲ್ಲದಿದ್ದರೆ ಜೀವನ ಸಾಗಿಸಬಹುದು ವಿನಃ ಅನ್ನವಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ.
ಅನ್ನ ಕೊಡುವ ರೈತರ ಸ್ಥಿತಿ ಇಂದು ಬಹಳ ದುಃಖಕರವಾಗಿದೆ 2020 ರಿಂದ 2025ರ ನಂತರ ರವರೆಗೆ ಇಂದು ಸಾವಿರಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಕಾರಣ ಬೆಳೆಯುವುದಕ್ಕಾಗಿ ಮಕ್ಕಳ ಶಿಕ್ಷಣ, ಮದುವೆ, ಕಾಯಿಲೆ ಇತ್ಯಾದಿ ಕಾರಣಕ್ಕಾಗಿ ಮಾಡಿಕೊಂಡ ಒಂದೆರಡು ಲಕ್ಷ ಸಾಲಕ್ಕಾಗಿ ಅಕಾಲಿಕ ಮಳೆ ಪ್ರಕೃತಿ ವಿಕೋಪ ವಿದ್ಯಾ ವಿದ್ಯುತ್ ನ, ನೀರಿನ ಭಾವ ಆರೋಗ್ಯ ಸಮಸ್ಯೆ ದೈಹಿಕ ಸಮಸ್ಯೆ ಮಾನಸಿಕ ಸಮಸ್ಯೆಗಳಿಂದ ಬೆಳೆ ಬರದೆ ಸಾಲ ಹಿಂತಿರುಗಿಸಲಾಗದೆ ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇಂದು ಹಲಾಲ್ ಹರಾಮ್ ಚಿಕ್ಕಪುಟ್ಟ ವಿಷಯಗಳಿಗೆ ಪ್ರತಿಭಟನೆ ಬಂದ್ ಮಾಡಿಸುವಂತಹ ಜನರು ದೇಶದ ಬೆನ್ನೆಲುಬು ರೈತ ಆತ್ಮಹತ್ಯೆ ಮಾಡಿಕೊಂಡರೆ ಯಾರಾದರೂ ಬಂದು ಬಂದ್ ಮಾಡಿಸುವುದನ್ನು ನೋಡಿದ್ದೀರಾ ಇಲ್ಲ.
ಇಡೀ ದೇಶದ ರಾಜ್ಯದ ಜನರು ಮುಂದೆ ಬಂದಿದ್ದಾರೆ ಇಲ್ಲ ಇಂದು ಅವರ ಸ್ಥಿತಿ ಅವರ ಕುಟುಂಬದ ಮಕ್ಕಳ ಸ್ಥಿತಿ ಅವರ ನೋವು ಹೇಳಲು ಸಾಧ್ಯವಾಗಿದೆ.
ಸಾವಿರಾರು ಕೋಟಿ ಸಾಲ ಮಾಡಿ ಓಡಿ ಹೋದವರನ್ನು ಹಾಗೆ ಬಿಡ್ತಾರೆ ಆದರೆ ಚಿಕ್ಕ ಪುಟ್ಟ ಸಾಲ ಮಾಡಿ ಮಾಡಿದರೆ ಬ್ಯಾಂಕಿನವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಮಾನಸಿಕ ದೈಹಿಕ ಹಿಂಸೆನಾ ಕೊಡುತ್ತಾರೆ ಆದರೆ ಸರ್ಕಾರ ಏನ್ ಮಾಡುತ್ತೆ ಅಷ್ಟು ಇಷ್ಟು ಪರಿಹಾರವನ್ನ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ ಹೊರತು ಅವರಿಗೆ ಅವರ ಕುಟುಂಬದವರಿಗೆ ಅವರ ಮಕ್ಕಳಿಗೆ ಒಂದು ಶಾಶ್ವತ ಪರಿಹಾರವನ್ನು ಕೊಡ್ತಾ ಇಲ್ಲ ಆದರೆ ನಮ್ಮ ಸರ್ಕಾರ ಅವರಿಗೆ ಒಂದು ಶಾಶ್ವತ ಪರಿಹಾರವನ್ನು ಕೊಡಬೇಕಾದದ್ದು ಸರ್ಕಾರದ ಮತ್ತು ನಮ್ಮ ಸಮಾಜದ ಜವಾಬ್ದಾರಿಯಾಗಿದೆ.
ಪ್ರಕ್ರಿಯೆ ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಪ್ರಕೃತಿ ವಿಕೋಪಗಳು ಬಂದಂತಹ ಸಂದರ್ಭದಲ್ಲಿ ಬೆಳೆ ನಷ್ಟವಾದರೆ ಸಿಗುವಂತಹ ಪರಿಹಾರ ರೈತರಿಗೆ ಸಿಗುತ್ತೆ ಅವರ ಹೆಸರಿನಲ್ಲಿ ಇದ್ದರೆ ಮಾತ್ರ ಸಿಗುತ್ತೆ. ಆದರೆ ಗುತ್ತಿಗೆ ತೆಗೆದುಕೊಂಡು ಬೆಳೆ ಬೆಳೆಯುತ್ತಿರುವಂತಹ ರೈತರಿಗೆ ಇದರ ಹಣ ಸಿಗುವುದು ಬಹಳ ಕಷ್ಟ ಆದರೆ ಇದ ಗುತ್ತಿಗೆ ಪಡೆದಂತಹ ರೈತರಿಗೂ ಸಹ ಪರಿಹಾರ ಸುಲಭವಾಗಿ ಸಿಗುವಂತಾಗಬೇಕು.
ಇಂದು ನಮ್ಮ ಸಂಸತ್ತಿನಲ್ಲಿ ಮಸೀದಿ ಮಂದಿರಗಳ ಕೆಳಗಡೆ ಏನಿದೆ ಎಂಬುದರ ಬಗ್ಗೆ 60 / 70 ವರ್ಷಗಳ ಹಿಂದೆ ಆಮಂತ್ರಿ ಹೀಗ್ ಮಾಡಿದ್ರು ಈ ಮಂತ್ರಿ ಹೀಗ ಮಾಡಿದ್ರು ಅನ್ನೋದರ ಬಗ್ಗೆ ರಾಷ್ಟ್ರಗೀತೆಗಳ ಬಗ್ಗೆ ನಡೆಯುತ್ತದೆ ಆದರೆ ದೇಶದಲ್ಲಿ ದಿನ ದಿನ ಸಾಯುತ್ತಿರುವಂತಹ ರೈತರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಅದರ ಪರಿಹಾರದ ಬಗ್ಗೆ ಅವರ ಕುಟುಂಬದವರ ಬಗ್ಗೆ ಯಾವುದೇ ರೀತಿಯಾದಂತಹ ಚರ್ಚೆ ಆಗ್ತಾ ಇಲ್ಲ ಕಾರಣ ಸರ್ಕಾರದ ಬೇಜವಾಬ್ದಾರಿತನ ರೈತರ ಬಗ್ಗೆ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು.
ದೇಶದ ಬೆನ್ನೆಲುಬು ಅನ್ನ ಕೊಡುವ ರೈತರ ಬಗ್ಗೆ ಚರ್ಚೆ ಆಗಬೇಕು ಪರಿಹಾರ ಸಿಗ್ಬೇಕು.
ಕೊನೆಯಲ್ಲಿ ದೇಶಕ್ಕೆ ಅನ್ನ ಕೊಡು ರೈತ ದೇಶದ ಬೆನ್ನೆಲುವಾದರೆ ದೇಶ ಕಾಯೋ ಸಿಪಾಯಿ ಜ್ಞಾನ ಕೊಡು ಗುರು ಮಾನವೀಯತೆ ಬುದ್ಧಿ ಹೇಳೋ ತಂದೆ ತಾಯಿಗಳು ದಾರಿ ತೋರಿಸುವಂತಹ ಸಮಾಜ ನೈತಿಕ ಮೌಲ್ಯಗಳನ್ನು ಕಲಿಸುವಂತಹ ಧಾರ್ಮಿಕ ಗುರುಗಳು ಎಲ್ಲರೂ ಸಹ ಬೆನ್ನೆಲುಬಿನ ಒಂದೊಂದು ಮೂಳೆಗಳಾಗಿದ್ದಾರೆ ಇವುಗಳು ಸದೃಢವಾಗಿದ್ದರೆ ನಮ್ಮ ದೇಶ ನಮ್ಮ ಸಮಾಜ ಸದೃಢವಾಗುತ್ತೆ, ಸುಭದ್ರವಾಗುತ್ತೆ ಇಲ್ಲದಿದ್ದರೆ ಬೆನ್ನೆಲುಬಿನ ಒಂದು ಮೂಳೆ ಸಹ ಆ ಕಡೆ ಈ ಕಡೆ ಜಾರಿದರೆ ಯಾವ ರೀತಿ ವ್ಯಕ್ತಿ ದೈಹಿಕವಾಗಿ ಮಾನಸಿಕವಾಗಿ ರೋಗಕ್ಕೆ ಒಳಗಾಗುತ್ತಾನೋ ಅದೇ ರೀತಿ ನಮ್ಮ ದೇಶ ನಮ್ಮ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ನೈತಿಕವಾಗಿ ಧಾರ್ಮಿಕವಾಗಿ ಸದೃಢವಾಗಬೇಕಾದರೆ ಮೊದಲು ಮಣ್ಣಿನ ಮಗ ದೇಶದ ಬೆನ್ನೆಲುಬು ಅನ್ನ ಕೊಡುವ ರೈತ ಸದೃಢನಾಗಬೇಕು ಆಗ ಇತರ ಎಲ್ಲಾ ಮೂಳೆಗಳು ಅಂದರೆ ಸಿಪಾಯಿ ತಂದೆ ತಾಯಿಗಳು ಧಾರ್ಮಿಕ ಗುರುಗಳು ಸಮಾಜ ತನ್ನಷ್ಟಕ್ಕೆ ತಾನೇ ಸದೃಢವಾಗುತ್ತದೆ ಎಲ್ಲರಿಗೂ ಸಹ ರೈತರ ದಿನದ ಶುಭಾಶಯಗಳು.
ಈ ದಿನವನ್ನು ಅರ್ಥಪೂರ್ಣವನ್ನಾಗಿ ಮಾಡಲು ಎಲ್ಲಾ ಸಮಾಜ ಸರ್ಕಾರ ಎಲ್ಲರೂ ಸಹ ರೈತರ ಬಗ್ಗೆ ಹೆಚ್ಚು ಕಾಳಜಿಯನ್ನ ವಹಿಸಬೇಕು. ಅವರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಬೇಕು. ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವನ್ನ ಮಾಡಬೇಕು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡಬೇಕು.
ರೈತರ ಭದ್ರತೆಯೇ
ದೇಶದ ಭದ್ರತೆ
ಸಮಾಜದ ಭದ್ರತೆ.












