ಶಾಹಿ ಈದ್‍ಗಾಹ್ ಮಸೀದಿ ಕೆಡಹುವ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟು

0
11355

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 5: ಮಥುರಾದ ಶಾಹಿ ಈದ್‍ಗಾಹ್ ಮಸೀದಿಯನ್ನು ಕೆಡಹಬೇಕು. ಅದನ್ನು ಕೃಷ್ಣ ಜನ್ಮಭೂಮಿಯಾಗಿ ಘೋಷಿಸಬೇಕೆಂದು ವಕೀಲ ಮಹೇಕ್ ಮಹೇಶ್ವರ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟಿನ ಜಸ್ಟಿಸ್ ಸಂಜೀವ್ ಖನ್ನ, ದೀಪಂಕರ್ ದತ್ತರ ಪೀಠ ತಳ್ಳಿ ಹಾಕಿದೆ.

ಅಲಾಹಾಬಾದ್ ಹೈಕೋರ್ಟಿನ ಆದೇಶದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ವಕೀಲರು ಅರ್ಜಿ ಸಲ್ಲಿಸಿದ್ದರು. ವಿವಾದ ಸ್ಥಳ ಹಿಂದೂವಾದ ಕೃಷ್ಣ ಜನ್ಮಭೂಮಿಯೆಂದು ಅದನ್ನು ಹಿಂದೂಗಳಿಗೆ ಕೊಡಬೇಕೆಂದು ಅಲ್ಲಿ ಕೃಷ್ಣ ಜನ್ಮಸ್ಥಾನ್ ಕಟ್ಟಲು ಅನುಮತಿಸಬೇಕೆಂದು ಅರ್ಜಿದಾರರು ಕೇಳಿದ್ದರು.

ಇದಕ್ಕೆ ಸಂಬಂಧಿಸಿ ಹಲವು ಸಿವಿಲ್ ಅರ್ಜಿಗಳು ಕೋರ್ಟಿನಲ್ಲಿದೆ. ಈ ಪರಿಸ್ಥಿತಿಯಲ್ಲಿ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬೇಕಾಗಿಲ್ಲ ಎಂದು ಕೋರ್ಟು ಹೇಳಿತು. ಆದರೆ ಅಲಾಹಾಬಾದ್ ಹೈಕೋರ್ಟು ತನ್ನ ಕಕ್ಷಿಯ ಅರ್ಜಿ ಮಾತ್ರ ತಳ್ಳಿಹಾಕಿದ್ದು, ಮಥುರಾ ಈದ್‍ಗಾಹ್‍ಗೆ ಸಂಬಂಧಿಸಿದ ಇತರ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಮಹೇಶ್ವರಿಯವರ ವಕೀಲರು ಕೋರ್ಟಿನಲ್ಲಿ ವಾದಿಸಿದರು. ನೀವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೀರಿ. ಆದ್ದರಿಂದ ಅದನ್ನು ಸ್ವೀಕರಿಸುವುದಿಲ್ಲ. ಈ ವಿಷಯಲ್ಲಿ ಇನ್ನೊಂದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಸ್ಟಿಸ್ ಖನ್ನ ಹೇಳಿದರು.