ಪೆಲೆಸ್ತೀನ್ ಮುಸ್ಲಿಮರ ಅಚಲ ನಂಬಿಕೆ, ಪ್ರತಿರೋಧ ಗುಣವನ್ನು ತಿಳಿಯಲು ಕುರ್ ಆನ್ ಓದುತ್ತಿರುವ ಅಮೆರಿಕದ ಯುವ ಜನತೆ

0
4207

ಸನ್ಮಾರ್ಗ ವಾರ್ತೆ

ಅಮೇರಿಕಾದ ಯುವತಿ ಮೆಗಾನ್ ಬಿ ರೈಸ್. ಆಕೆಗೆ ಓದು ಎಂದರೆ ಅಚ್ಚುಮೆಚ್ಚು. ಅವರು ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಡಿಸ್ಕಾರ್ಡ್‌ನಲ್ಲಿ ರೋಮ್ಯಾನ್ಸ್ ಕಾದಂಬರಿಯ ಕ್ಲಬ್ ಆರಂಭಿಸಿದ್ದಾರೆ. ಅದರೊಂದಿಗೆ ಟಿಕ್‌ಟಾಕ್‌ನಲ್ಲಿ ಪುಸ್ತಕ ವಿಮರ್ಶೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಚಿಕಾಗೋದಲ್ಲಿ ವಾಸಿಸುವ 34 ವರ್ಷದ ರೈಸ್, ಕೆಲವು ದಿನಗಳ ಹಿಂದೆ ಗಾಜಾದಲ್ಲಿ ತಲೆದೋರಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿದ್ದಾರೆ.

“ನಾನು ಪ್ಯಾಲೆಸ್ತೀನಿಯನ್ ಜನರ ವಿಶ್ವಾಸದ ಕುರಿತು ಮಾತನಾಡಲು ಬಯಸುತ್ತೇನೆ. ಅವರ ವಿಶ್ವಾಸ ಎಷ್ಟು ಪ್ರಬಲವಾಗಿದೆ ಎಂಬುವುದು ಮುಖ್ಯವಾಗುತ್ತದೆ. ಅವರು ಸರ್ವಸ್ವವನ್ನು ಕಳೆದುಕೊಂಡರೂ ಸಹ ದೇವರಿಗೆ ಧನ್ಯವಾದ ಸಲ್ಲಿಸಲು ಆದ್ಯತೆ ನೀಡುತ್ತಾರೆ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ಇದರ ಹಿನ್ನೆಲೆ ಅರಿತಾಗ ಇದರ ಹಿಂದೆ ಕುರ್ ಆನ್ ಅಧ್ಯಯನ, ಅದರ ಮೇಲಿರುವ ಅಚಲ ನಂಬಿಕೆಯೆಂಬುವುದು ಆಕೆಗೆ ಅರಿವಾಗಿದೆ. ಆದ್ದರಿಂದ ಧಾರ್ಮಿಕವಾಗಿ ಬೆಳೆಯದಿದ್ದರೂ ರೈಸ್, ಡಿಸ್ಕಾರ್ಡ್‌ನಲ್ಲಿ “ವಿಶ್ವ ಧರ್ಮ ಪುಸ್ತಕ ಕ್ಲಬ್” ಅನ್ನು ಆಯೋಜಿಸಿದರು. ಅಲ್ಲಿ ಎಲ್ಲಾ ಹಿನ್ನೆಲೆಯ ಜನರು ಅವಳೊಂದಿಗೆ ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು.

ಕುರ್ ಆನ್ ಗಾಢವಾಗಿ ಅಧ್ಯಯನ ಮಾಡುತ್ತ ಹೋದ ಅವರಿಗೆ, ಅದರಲ್ಲಿ ಬಂಡವಾಳ ಶಾಹಿ ದೌರ್ಜನ್ಯದ ವಿರುದ್ಧದ, ಸ್ತೀಯರ ಪರ ಮತ್ತು ದೌರ್ಜನ್ಯದ ವಿರುದ್ಧ ಇರುವ ವಿಚಾರಗಳನ್ನು ಬಹಳಷ್ಟು ಸ್ಪಷ್ಟವಾಗಿ ವಿವರಿಸಿರುವುದನ್ನು ಅರಿತ ಆಕೆ ಒಂದೇ ತಿಂಗಳಲ್ಲಿ  ಇಸ್ಲಾಮ್ ಧರ್ಮ ಸ್ವೀಕರಿಸಿದರು ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

9/11 ನಂತರ ಇಸ್ಲಾಮಿನ ಋಣಾತ್ಮಕ ವಿಚಾರಗಳ ಕುರಿತು ತಿಳಿಯಲೆಂದು ಕುರ್ ಆನ್ ಕೈಗೆತ್ತಿಕೊಂಡ ಜನರು ಇಸ್ಲಾಮ್ ಧರ್ಮದತ್ತ ಆಕರ್ಷಿತರಾಗಿ ದೊಡ್ಡ ಸಂಖ್ಯೆಯಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಗಾರ್ಡಿಯನ್ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಇದೀಗ ಹಮಾಸ್ ದಾಳಿಯ ಕುರಿತು, ಗಾಝಾದ ಜನರ ಮೇಲಿನ ದೌರ್ಜನ್ಯದ ಹೊರತಾಗಿಯೂ ಅವರಲ್ಲಿನ ಅಚಲ ನಂಬಿಕೆ, ದೇವನಿಗೆ ಕೃತಜ್ಞತೆ ಸಲ್ಲಿಸುವುದನ್ನು ನೋಡಿ ಇಸ್ಲಾಮಿನಲ್ಲಿ ಅಂತಹ ಏನೂ ಅಂಶ ಇವರನ್ನು ಆ ವಿಶ್ವಾಸದಲ್ಲಿ ದೃಡಗೊಳಿಸಿದೆ ಎಂಬುವುದನ್ನು ಅರಿಯಲು ಹೋದ ಯುವಕರು ಇಸ್ಲಾಮಿನ ಸಂದೇಶದಲ್ಲಿ ಆಕರ್ಷಿತರಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳ್ಳುವುದರ ಕುರಿತು ಸವಿವರವಾಗಿ ಗಾರ್ಡಿಯನ್ ವರದಿ ವಿವರಿಸಿದೆ.