ತೃಶೂರಿನ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯಿಂದ ಗುಂಡು ಹಾರಾಟ

0
116

ಸನ್ಮಾರ್ಗ ವಾರ್ತೆ

ತೃಶೂರ್, ನ.21: ತೃಶೂರಿನ ವಿವೇಕಾನಂದ ಶಾಲೆಯ ಕ್ಲಾಸಿಗೆ ಬಂದು ಹಳೆ ವಿದ್ಯಾರ್ಥಿ ಗುಂಡು ಹಾರಿಸಿದ ಘಟನೆ ನಡೆದಿದೆ. ಜಗನ್ ಎಂಬ ಹಳೆ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ.

ಘಟನೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಧ್ಯಾಪಕರೊಂದಿಗಿನ ವೈಷಮ್ಯ ಇದಕ್ಕೆ ಕಾರಣ ಎಂದು ಪೊಲೀಸರು ಹೇಳುತ್ತಿದ್ದಾರೆ.

ನಗರದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆ ಇದು. ಜಗನ್ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ಕೇಳಿಕೊಂಡು ಬಂದಿದ್ದಾನೆ. ಅವನು ಸಿಗಲಿಲ್ಲ. ನಂತರ ಸ್ಟಾಪ್‍ರೂಮ್‍ಗೆ ನುಗ್ಗಿ ಬೆದರಿಕೆ ಹಾಕಿದ್ದಾನೆ. ತರಗತಿ ಕೋಣೆಗೆ ಹತ್ತಿ ಮೇಲ್ಭಾಗಕ್ಕೆ ಮೂರು ಬಾರಿ ಗುಂಡು ಹಾರಿಸಿದ್ದಾನೆ.

ಬೆಳಗ್ಗೆ ಹತ್ತು ಗಂಟೆಗೆ ಈ ಘಟನೆ ನಡೆದಿದೆ. ಏರ್ ಗನ್ ನೊಂದಿಗೆ ಸ್ಟಾಪ್ ರೂಂಗೆ ಬಂದು ಅಧ್ಯಾಪಕರಿಗೆ ಬೆದರಿಕೆ ಹಾಕಿದ್ದಾನೆ. ಹೀಗೆ ಮಾಡಿ ಪಾರಾಗಲೂ ನೋಡಿದ ಯುವಕನನ್ನು ಊರವರು ಮತ್ತು ಅಧ್ಯಾಪಕರು ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಆತ ಸ್ಟಾಪ್ ರೂಮಿಗೆ ಬರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದು ಈಗ ವೈರಲ್ ಆಗಿದೆ. ಈಗ ಆರೋಪಿ ಪೊಲೀಸರ ವಶದಲ್ಲಿದ್ದಾನೆ.

LEAVE A REPLY

Please enter your comment!
Please enter your name here