ಗಾಝ ಶಾಂತಿ ಸಮಿತಿಯಲ್ಲಿ ಫೆಲಸ್ತೀನಿಯರಿಲ್ಲ!

0
226

ಸನ್ಮಾರ್ಗ ವಾರ್ತೆ

ಜಕಾರ್ತ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ಗಾಝ ಶಾಂತಿ ಸಮಿತಿಯ ಸದಸ್ಯತ್ವದಿಂದ ಇಂಡೊನೇಶಿಯ ಹಿಂದೆ ಸರಿಯಬೇಕೆಂದು ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ ಫ್ರಾನ್ಸಸ್ಕ ಅಲ್‌ಬಾನಿಸ್ ಜಕಾರ್ತದಲ್ಲಿ ರಾಯಿಟರ್ಸ್‌ನೊಂದಿಗೆ ಮಾತಾಡುತ್ತ ಹೇಳಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕ ಜೊತೆಗೂಡಿ ನಿಯಂತ್ರಿಸುವ ಇಂತಹ ವ್ಯವಸ್ಥೆಯಲ್ಲಿ ಜಗತ್ತಿನ ಅತ್ಯಂತ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೊನೇಶಿಯ ಭಾಗಿಯಾಗಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಇಂಡೊನೇಶಿಯ ಟ್ರಂಪ್ ರೂಪಿಸಿದ ಶಾಂತಿ ಸಮಿತಿಯಲ್ಲಿ ಸೇರಿ ಗಾಝದ ಅಂತಾರಾಷ್ಟ್ರೀಯ ಶಾಂತಿ ಸೇನೆಗೆ ತನ್ನ ಸೈನಿಕರನ್ನು ಕಳುಹಿಸುವುದಾಗಿ ಹೇಳಿತ್ತು.

ಫೆಲಸ್ತೀನಿ ಪ್ರದೇಶಗಳ ತಾತ್ಕಾಲಿಕ ಆಡಳಿತ ನೋಡಿಕೊಳ್ಳುವ ಉದ್ದೇಶ ಇರುವ ಈ ಮಂಡಳಿಯಲ್ಲಿ ಒಬ್ಬನೇ ಒಬ್ಬ ಫೆಲಸ್ತೀನಿ ಇಲ್ಲ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾಗಿದೆ. ಫೆಲಸ್ತೀನ್ ಜನರ ಭವಿಷ್ಯ ತೀರ್ಮಾನಿಸಲು ಇಸ್ರೇಲಿಗೆ ಯಾವುದೇ ಕಾನೂನಾತ್ಮಕ ಹಕ್ಕುಗಳಿಲ್ಲ ಎಂದು ಅವರು ಫ್ರಾನ್ಸಸ್ಕ ಹೇಳಿದರು. ಇದೇ ವೇಳೆ ಶಾಂತಿ ಸಮಿತಿಗೆ ಸಂಬಂಧಿಸಿದ ಚರ್ಚೆಗಳನ್ನು ಸ್ಥಗಿತವಾಗಿಸಿದ್ದೇವೆ ಎಂದು ಇಂಡೊನೇಶಿಯದ ವಿದೇಶ ಸಚಿವಾಲಯ ತಿಳಿಸಿದೆ.