ಉದ್ಯೋಗ ಕೊಡುವುದಾಗಿ ಹೇಳಿ ವಂಚಿಸುವವರಿದ್ದಾರೆ: ದುಬೈ ಪೊಲೀಸರ ಎಚ್ಚರಿಕೆ

0
227

ಸನ್ಮಾರ್ಗ ವಾರ್ತೆ

ಉದ್ಯೋಗ ನೀಡುವುದಾಗಿ ಹೇಳಿಕೊಳ್ಳುವ ಯಾರೆಂದಿಗೂ ಬ್ಯಾಂಕಿಂಗ್ ಮಾಹಿತಿ ಮತ್ತು ಓಟಿಪಿಯನ್ನು ಹಂಚಿಕೊಳ್ಳಬೇಡಿ ಎಂದು ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಅಥವಾ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳ ಮೂಲಕ ಬಂದ ಪರಿಚಯವಿಲ್ಲದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಉದ್ಯೋಗಾಕಾಂಕ್ಷಿಗಳಿಗೆ ಸೂಚಿಸಲಾಗಿದೆ.

ಯಾರಾದ್ರೂ ಮೋಸದ ಉದ್ಯೋಗ ಕೊಡುಗೆಯನ್ನು ನೀಡಿದರೆ ಅನುಮಾನಾಸ್ಪದ ಖಾತೆ ಅಥವಾ ಸಂಭಾವ್ಯ ದುರುದ್ದೇಶ ಪೂರಿತ ಲಿಂಕುಗಳನ್ನು ಕಳುಹಿಸಿದರೆ ದುಬೈ ಪೊಲೀಸರಿಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.

ವಂಚಕರು ಆಕರ್ಷಕ ಜಾಹೀರಾತುಗಳನ್ನು ಕೊಡುತ್ತಾರೆ. ಉದ್ಯೋಗ ನೀಡುವುದಾಗಿ ಆಮಿಷ ಒಡ್ಡುತ್ತಾರೆ. ಹೊಸ ಉದ್ಯೋಗಾಕಾಂಕ್ಷಿಗಳು ಅವರ ಆಮಿಷಕ್ಕೆ ಬಲಿಬೀಳಬಾರದು. ಅವರು ಕೇಳಿದ ಓಟಿಪಿಯನ್ನು ಕೊಟ್ಟು ಬ್ಯಾಂಕ್ ವಿವರವನ್ನು ಅವರ ಜೊತೆ ಹಂಚಿಕೊಂಡರೆ ವಂಚನೆಗೆ ಕಾರಣವಾಗಬಹುದು. ಹೀಗೆನಾದರೂ ಆದರೆ 901 ಗೆ ಕರೆ ಮಾಡಿ ಎಂದು ದುಬೈ ಪೋಲಿಸರು ತಿಳಿಸಿದ್ದಾರೆ.