ಸನ್ಮಾರ್ಗ ವಾರ್ತೆ
ತಿರುವನಂತಪುರಂ: ತ್ರಿಶೂರ್ ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಮತ್ತು ಸಿಪಿಎಂ ನಡುವೆ ಒಪ್ಪಂದ ನಡೆದಿದೆ ಎಂಬ ಬಲವಾದ ಶಂಕೆಯನ್ನು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ವ್ಯಕ್ತಪಡಿಸಿದ್ದಾರೆ.
ಆದರೆ, ತ್ರಿಶೂರ್ ಮತ್ತು ತಿರುವನಂತಪುರಂನಲ್ಲಿ ಯುಡಿಎಫ್ ಗೆಲುವುದು ಖಚಿತ. ಬಿಜೆಪಿ ಈ ಸ್ಥಾನಗಳಲ್ಲಿ ಪ್ರಚಾರ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುಡಿಎಫ್ ಹಿಂದೆಂದಿಗಿಂತಲೂ ಬಹುಮತ ಹೆಚ್ಚಿಸಿಕೊಂಡು ಗೆಲುವು ಸಾಧಿಸಲಿದೆ ಎಂದರು.
ಕೇರಳದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಅದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸತೀಶನ್ ಹೇಳಿದರು. ಆದಾಗ್ಯೂ, ತ್ರಿಶೂರ್ ಸೀಟು ಬಿಜೆಪಿಗೆ ಪಡೆಯಲು ಎಕ್ಸಾಲಜಿಕ್, ಕರುವನ್ನೂರ್ ಪ್ರಕರಣಗಳಲ್ಲಿ ಇತ್ಯರ್ಥದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸತೀಶನ್ ಆರೋಪಿಸಿದರು.
ಸಿಬಿಐ ಇಡಿ ತನಿಖೆ ಈ ಪ್ರಕರಣದಲ್ಲಿ ನಡೆಯಬೇಕಾಗಿದೆ. ಕಾರ್ಪೊರೇಟ್ ಸಚಿವಾಲಯ ಮಾತ್ರ ತನಿಖಿಸಿದರೆ ಪ್ರಯೋಜನ ಇಲ್ಲ. ಕೋರ್ಟಿನ ಮೇಲ್ನೋಟದಲ್ಲಿ ತನಿಖೆ ನಡೆಯಬೇಕೆಂದು ಈ ಸಂದರ್ಭದಲ್ಲಿ ಅವರು ಹೇಳಿದರು.












