ಪರಿಸ್ಥಿತಿ ಹದಗೆಟ್ಟಿದೆ: ದೆಹಲಿಯಲ್ಲಿ ಕೋವಿಡ್ ಮೂರನೇ ಘಟ್ಟಕ್ಕೆ- ಸಿಎಂ ಕೇಜ್ರಿವಾಲ್

0
412

ಸನ್ಮಾರ್ಗ ವಾರ್ತೆ

ನವದೆಹಲಿ: ದೆಹಲಿಯಲ್ಲಿ ಕೋವಿಡ್ ಮೂರನೇ ಘಟ್ಟಕ್ಕೆ ಕಾಲಿಟ್ಟಿದೆ, ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಧರಿಸುವುದು ರೂಢಿಸಿಕೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ದೆಹಲಿಯ ಜನತೆಯೊಂದಿಗೆ ವಿನಂತಿಸಿದರು.

“ಮಾಸ್ಕ್ ಧರಿಸದವರು ಅಥವಾ ಸರಿಯಾದ ರೀತಿಯಲ್ಲಿ ಧರಿಸದೇ ಇರುವವರು ಹೀಗೆ ಅನೇಕ ಮಂದಿಯನ್ನು ನಾನು ಪ್ರತಿನಿತ್ಯ ಕಾಣುತ್ತಿದ್ದೇನೆ. ಮೂಗು ಮತ್ತು ಬಾಯಿ ತೆರೆದುಕೊಂಡು ಮಾಸ್ಕ್ ಧರಿಸಿದರೆ ಯಾವುದೇ ಪ್ರಯೋಜನವೂ ಇಲ್ಲ. ಕೋವಿಡ್‌ಗೆ ಬಡವ-ಶ್ರೀಮಂತ, ಯುವಕ-ವೃದ್ಧ, ಪುರುಷ-ಮಹಿಳೆ ಎಂಬ ತಾರತಮ್ಯವಿಲ್ಲ. ಯಾರಿಗೂ ರೋಗ ಬರಬಹುದು ಎಂದು ಕೇಜ್ರಿವಾಲ್ ಎಚ್ಚರಿಸಿದರು.

ಚಳಿಗಾಲದಲ್ಲಿನ ದೆಹಲಿಯ ವಾತಾವರಣ ಮಲಿನೀಕರಣದ ಸಮಸ್ಯೆಯನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು‌.

ಕೋವಿಡ್ ಪಾಸಿಟಿವ್ ಸಂಖ್ಯೆಯು ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೊರೋನಾ ಮೂರನೇ ಘಟಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.