ಆರು ತಿಂಗಳಿಗಿಂತ ಹೆಚ್ಚು ಹೊರಗಿದ್ದವರಿಗೆ ದುಬೈಗೆ ಮರು ಪ್ರವೇಶಕ್ಕೆ ಅನುವು

0
47

ಸನ್ಮಾರ್ಗ ವಾರ್ತೆ

ಅಬುಧಾಬಿ: ಆರು ತಿಂಗಳಿಗಿಂತ ಅಧಿಕ ಸಮಯ ದುಬೈಯಿಂದ ಹೊರಗೆ ವಾಸಿಸಿದ ರೆಸಿಡೆಂಟ್ ವೀಸಾದ ಮಂದಿಗೆ ದುಬೈಗೆ ರೀ ಎಂಟ್ರಿ ಪರ್ಮಿಟ್ ಅನುಮತಿಸಿದೆ. ಆದ್ದರಿಂದ ಆರು ತಿಂಗಳಿಗಿಂತ ಹೆಚ್ಚು ಸಮಯ ದುಬೈಯಿಂದ ಹೊರಗೆ ಇದ್ದ ಕಾರಣಕ್ಕಾಗಿ ವಿಸಾ ರದ್ದಾದವರು ಮತ್ತೆ ಅದೇ ವಿಸಾದೊಂದಿಗೆ ದುಬೈಗೆ ಪ್ರವೇಶಿಸಬಹುದಾಗಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಸಿಟಿಜನ್ ಶಿಪ್ ನಿರ್ದೇಶನ ಇಲಾಖೆ ಬಿಡುಗಡೆಗೊಳಿಸಿದೆ.

ಯುಎಇ ರೆಸಿಡೆಂಟ್ ವೀಸಾ ಇರುವವರು ಆರು ತಿಂಗಳ ಒಳಗೆ ದುಬೈಗೆ ಪ್ರವೇಶಿಸಬೇಕು ಎಂಬ ನಿಯಮವಿದೆ. ಇದಕ್ಕೆ ತಪ್ಪಿದರೆ ವಿಸಾ ರದ್ದಾಗುತ್ತದೆ. ಹೀಗೆ ವಿಸಾ ರದ್ದುಗೊಂಡವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ರಿ ಎಂಟ್ರಿ ಅನುಮತಿ ಲಭ್ಯವಾದ 30 ದಿನಗಳ ಒಳಗೆ ಇಂಥವರು ಯುಎಇ ಪ್ರವೇಶಿಸಬೇಕು. ಯುಎಯಿ ಯಿಂದ ಹೊರಗಡೆ ಇದ್ದೇ ಮರಳುವ ಬಯಕೆಯನ್ನು ವ್ಯಕ್ತಪಡಿಸಬೇಕು. ದುಬೈಯಿಂದ ಹೊರಗಿರುವುದಲ್ಲದೆ ಪ್ರತಿ 30 ದಿನಕ್ಕೆ 100 ದಿರ್ಹಮ್ ದಂಡವನ್ನು ಕಟ್ಟಬೇಕು. ಇದಲ್ಲದೆ ಐಸಿಪಿಯ ನಿಯಮದ ಪ್ರಕಾರ 150 ದಿರ್ಹಮ್ ಶುಲ್ಕ ಆಗಿ ಕಟ್ಟಬೇಕು . ಅಲ್ಲದೆ ಯಾವ ಕಾರಣಕ್ಕಾಗಿ ದೇಶದಿಂದ ಹೊರಗಿದ್ದಿರಿ ಎಂಬುದನ್ನು ಕೂಡ ಸ್ಪಷ್ಟಪಡಿಸಬೇಕು.