“ಮಂದಿರದಲ್ಲಿ ಗಂಟೆ ಹೊಡೆಯುತ್ತಿದ್ದವರು ಮುಖ್ಯಮಂತ್ರಿ” : ಬಿಹಾರ ಸಚಿವರಿಂದ ವಿವಾದಾಸ್ಪದ ಹೇಳಿಕೆ

0
329

ಸನ್ಮಾರ್ಗ ವಾರ್ತೆ

ಪಟ್ನ,ಜ.23: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಬಿಹಾರದ ಕಂದಾಯ ಸಚಿವ ಅಲೋಕ್ ಮೆಹತಾ ವ್ಯಂಗ್ಯವಾಡಿದ್ದು ವಿವಾದ ಸೃಷ್ಟಿಸಿದೆ. ಅವರು ಯೋಗಿಯನ್ನು ದೇವಸ್ಥಾನದಲ್ಲಿ ಗಂಟೆ ಆಡಿಸುತ್ತಿದ್ದ ಒಬ್ಬ ವ್ಯಕ್ತಿ ಪ್ರಮುಖ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಬಿಹಾರದ ಭಾಗಲಪುರ ಜಿಲ್ಲೆಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವರು ಮಾತಾಡುತ್ತಿದ್ದರು.

ಹಿಂದೆ ಮಂದಿರಗಳ ಗಂಟೆ ಬಾರಿಸುತ್ತಿದ್ದ ಜನರು ಈಗ ಮುಖ್ಯಸ್ಥಾನದಲ್ಲಿದ್ದಾರೆ. ಉದಾಹರಣೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನೇ ತೆಗೆದುಕೊಳ್ಳಿ”ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಸಚಿವರ ಹೇಳಿಕೆಯನ್ನು ಬೆಂಬಲಿಸಿ, ವಿರೋಧಿಸಿ ಹಲವು ಕಮೆಂಟುಗಳು ಬಂದಿವೆ. ಈ ಹಿಂದೆ, ತುಳಸೀದಾಸ್ ರಾಮಾಯಣವನ್ನು ಆಸ್ಪದ ಮಾಡಿ ರಚಿಸಿದ್ದ “ರಾಮಚರಿತ ಮಾನಸ್ ” ಎಂಬ ಕಾವ್ಯವು  ಸಮಾಜದಲ್ಲಿ ದ್ವೇಷ ಹರಡುತ್ತದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರ ಶೇಖರ್ ಹೇಳಿಕೆ ನೀಡಿದ್ದು ತೀವ್ರ ವಿವಾದ ಸೃಷ್ಟಿಸಿತ್ತು.