ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಹಿಜಾಬ್ ಪ್ರಕರಣ: ವಿದ್ಯಾರ್ಥಿನಿಯರಲ್ಲಿ ಆಶಾವಾದ

0
403

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: “ಪರಿಶೀಲಿಸಬಹುದಾದ ಪ್ರಕರಣಗಳ ಪಟ್ಟಿಗೆ ಹಿಜಾಬ್ ಪ್ರಕರಣವನ್ನು ಸೇರಿಸುವುದರ ಬಗ್ಗೆ ಚಿಂತಿಸುವುದಾಗಿ” ಸುಪ್ರೀಮ್ ಕೋರ್ಟಿನ ಚೀಫ್ ಜಸ್ಟಿಸ್ ಡಿ.ವೈ. ಚಂದ್ರಚೂಡ್ ತಿಳಿಸಿದ್ದಾರೆ.

“ಹಿಜಾಬ್ ನಿಷೇಧಿಸಿದ ಬಳಿಕ ಹಲವಾರು ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಗಳನ್ನು ತೊರೆಯುತ್ತಿದ್ದಾರೆ”. ಎಂದು ವಕೀಲರಾದ ಮಿನಾಕ್ಷಿ ಅರೋರ ನ್ಯಾಯಾಲಯಕ್ಕೆ ತಿಳಿಸಿದರು. ಫೆಬ್ರವರಿ ಆರರಂದು ಪರೀಕ್ಷೆಗಳು ಪ್ರಾರಂಭವಾಗುತ್ತದೆ. ವಿದ್ಯಾರ್ಥಿನಿಯರು ಹಿಜಾಬ್ ನಿಷೇಧ ಹೇರಿರುವಂತಹ ಸರಕಾರಿ ಶಿಕ್ಷಣ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ನಿಷೇಧ ಹೇರಿರುವ ಕಾರಣ ವಿದ್ಯಾರ್ಥಿನಿಯರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಧ್ಯಂತರ ತೀರ್ಪಿನ ಅಗತ್ಯವಿದೆಯೆಂದು ಮಿನಾಕ್ಷಿ ಅರೋರಾ ನ್ಯಾಯಾಲಯವನ್ನು ಆಗ್ರಹಿಸಿದರು.

ಇದಕ್ಕೆ ಉತ್ತರಿಸುತ್ತಾ ನ್ಯಾಯಮೂರ್ತಿ ಚಂದ್ರಚೂಡ್, ಮೂವರು ನ್ಯಾಯಾಧೀಶರ ಬೆಂಚು ಈ ಅರ್ಜಿಯನ್ನು ಪರಿಶೀಲಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿಯೂ ಶೀಘ್ರದಲ್ಲಿಯೇ ಈ ಬಗ್ಗೆ ದಿನಾಂಕ ಪ್ರಕಟಿಸುವುದಾಗಿಯೂ ಹೇಳಿದರು.