ಸಂತ್ರಸ್ತರಿಗೆ ಪರಿಹಾರ ಸಿಗದಿದ್ದರೂ ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ಮೋದಿ ಹುಟ್ಟುಹಬ್ಬ- ಮೇಧಾ ಪಾಟ್ಕರ್ ಟೀಕೆ

0
529

ಸನ್ಮಾರ್ಗ ವಾರ್ತೆ

ಭೋಪಾಲ್,ಸೆ. 18: ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಣೆ ವಿರುದ್ಧ ಪರಿಸರ ಹೋರಾಟಗಾರ್ತಿ ಮೇಧಾಪಾಟ್ಕರ್ ತೀವ್ರ ಟೀಕೆ ಮಾಡಿದ್ದಾರೆ. ಸರ್ದಾರ್ ಸರೋವರ್ ಆಣೆಕಟ್ಟಿನ ಜಲಮಟ್ಟ ಗುಜರಾತ್ ಸರಕಾರ ಹೆಚ್ಚಿದೆ. ಇದರಿಂದ ಹಲವು ಸ್ಥಳಗಳು ನೀರಿನಡಿಗೆ ಅವಶೇಷವಾಗಲಿದೆ ಎಂದು ಅವರು ಆರೋಪಿಸಿದ್ದಾರೆ. ಮಧ್ಯಪ್ರದೇಶದ ದರ್, ಬರವಾನಿ, ಅಲಿರಜಪುರ ಮೊದಲಾದ ಗ್ರಾಮಗಳು ನೀರಿನೊಳಗಾಗಲಿದ್ದು ಗುಜರಾತ್ ಸರಕಾರ ಸರ್ದಾರ ಸರೋವರ ಅಣೆಕಟ್ಟಿನ ಜಲಮಟ್ಟವನ್ನು 138.68 ಅಡಿಗೇರಿಸಿದೆ.

ಉತ್ಸವದಂತೆ ಮೋದಿ ಹುಟ್ಟುಹಬ್ಬ ಆಚರಿಸಿದರು. ಆದರೆ, ಅಣೆಕಟ್ಟಿನಿಂದ ಸಂಕಷ್ಟಪಡುವವರಿಗೆ ಇನ್ನೂ ನಷ್ಟ ಪರಿಹಾರ ಸಿಕ್ಕಿಲ್ಲ. ನಷ್ಟ ಪರಿಹಾರದ 1.857 ಕೋಟಿ ರೂಪಾಯಿ ಮೊತ್ತವನ್ನು ಗುಜರಾತ್ ಸರಕಾರ ಬಾಕಿ ಉಳಿಸಿಕೊಂಡಿದೆ ಎಂದು ಮಧ್ಯಪ್ರದೇಶ ಸರಕಾರ ಹೇಳುತ್ತಿದೆ. ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರಕಾರ ಈಗಿನ ಸಮಸ್ಯೆಗೆ ಕಾರಣವೆಂದು ಮೇಧಾಪಾಟ್ಕರ್ ಹೇಳಿದರು.