ಸನ್ಮಾರ್ಗ ವಾರ್ತೆ
ಮುಂಬೈ,ಆ. 24: ವೀರ ಸಾವರ್ಕರ್ರನ್ನು ಗೌರವಿಸಿದವರನ್ನು ಬಹಿರಂಗವಾಗಿ ಥಳಿಸಬೇಕೆಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಎನ್ಎಸ್ಯು ಕಾರ್ಯಕರ್ತರು ಸಾವರ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ಹಿನ್ನೆಲೆಯಲ್ಲಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಸಹಿಸಿದ ಕಷ್ಟಗಳನ್ನು ಅವರನ್ನು ಅಂಗೀಕರಿಸದವರು ಅರಿತುಕೊಳ್ಳಬೇಕು.ರಾಹುಲ್ ಗಾಂಧಿ ಕೂಡ ಸಾವರ್ಕರ್ರನ್ನು ಈ ಹಿಂದೆ ಅಪಮಾನಿಸಿದ್ದರು ಎಂದು ಉದ್ಧವ್ ಹೇಳಿದರು. ದಿಲ್ಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ನಲ್ಲಿ ಎಬಿವಿಪಿ ಕಾರ್ಯಕರ್ತರು ಸ್ಥಾಪಿಸಿದ್ದ ಸಾವರ್ಕರ್ ಪ್ರತಿಮೆಗೆ ಎನ್ಎಸ್ಯು ನಾಯಕರು ಚಪ್ಪಲಿ ಹಾರ ಹಾಕಿ ಕಪ್ಪು ಮಸಿ ಬಳಿದಿದ್ದರು.












