ತಮಿಳ್ನಾಡಿನಲ್ಲಿ ಉಗ್ರರು; ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ, ಬಿಗಿ ಬಂದೋಬಸ್ತ್

0
371

ಸನ್ಮಾರ್ಗ ವಾರ್ತೆ

ಚೆನ್ನೈ, ಆ., 24: ಆರು ಮಂದಿ ಲಕ್ಷರೆ ತಯ್ಯಿಬ ಉಗ್ರರು ತಮಿಳ್ನಾಡಿಗೆ ತಲುಪಿದ್ದಾರೆ ಎಂದು ಪೊಲೀಸ್ ಗುಪ್ತಚರ ವಿಭಾಗದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತೀವ ಜಾಗ್ರತೆ ವಹಿಸಲಾಗುತ್ತಿದೆ. ಕೋಯಮತೂರು ಗುರಿಯಾಗಿಟ್ಟು ಇವರು ಬಂದಿದ್ದಾರೆ ಎಂದು ತಿಳಿಯಲಾಗಿದೆ. ಇಲ್ಲಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಚೆನ್ನೈ ಸಹಿತ ತಮಿಳ್ನಾಡಿನ ಪ್ರಧಾನ ನಗರಗಳಲ್ಲಿ ಪೊಲೀಸರು ನಿರೀಕ್ಷಣೆ ಮತ್ತು ತಪಾಸಣೆ ನಡೆಸುತ್ತಿದ್ದಾರೆ. ಒಬ್ಬ ಪಾಕಿಸ್ತಾನಿ ಪ್ರಜೆ ಸಹಿತ ಆರು ಮಂದಿ ಸಮುದ್ರ ಮಾರ್ಗದ ಮೂಲಕ ತಮಿಳ್ನಾಡಿಗೆ ತಲುಪಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.ಶ್ರೀಲಂಕದಿಂದ ಸಮುದ್ರ ದಾರಿಯಾಗಿ ಕೋಯಮತ್ತೂರಿಗೆ ಬಂದಿದ್ದಾರೆ ಎಂದು ಸೂಚನೆ ಲಭಿಸಿದೆ.

ಎಡಿಜಿಪಿ ನೇತೃತ್ವದಲ್ಲಿ ಇಲ್ಲಿ ಸುರಕ್ಷೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಬಸ್‍ಸ್ಟಾಂಡ್, ರೈಲ್ವೆ ಸ್ಟೇಶನ್‍, ಮಾಲ್‍ಗಳು ಇತ್ಯಾದಿ ಕಡೆ ಪೊಲೀಸ್ ಶ್ವಾನದಳ, ಬಾಂಬ್ ಸ್ಕ್ವಾಡ್‍ಗಳಿಂದ ಪರಿಶೀಲನೆ ನಡೆಯುತ್ತಿವೆ. ಶ್ರೀಲಂಕಾದ ಚರ್ಚ್‌ನಲ್ಲಿ ನಡೆದ ಬಾಂಬ್ ದಾಳಿ ಕೇಸಿನಲ್ಲಿ ಐಎಸ್‍ಐಎಸ್‍ನೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಮುಹಮ್ಮದ್ ಅಝರುದ್ದೀನ್‍ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಕೋಯಮತ್ತೂರಿನ ಏಳು ಕಡೆ ಮತ್ತು ತಮಿಳ್ನಾಡಿನ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿ ಆತನನ್ನು ಬಂಧಿಸಲಾಗಿತ್ತು. ಕೋಯಮತ್ತೂರಿನಲ್ಲಿ ಬಾಂಬ್ ಸ್ಪೋಟ ನಡೆಸಲು ಸಂಚು ಎಂಬ ಆರೋಪದ ಮೆರೆಗೆ ಇನ್ನೂ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.