ಕೇರಳ: ರಾಜ್ಯಪಾಲರು ರಾಜೀನಾಮೆ ನೀಡಿ ಹೋಗದಿದ್ದರೆ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲ- ಮುರಳೀಧರನ್

0
1030

ಸನ್ಮಾರ್ಗ ವಾರ್ತೆ-
ಕಲ್ಲಿಕೋಟೆ, ಜ. 3: ರಾಜ್ಯಪಾಲರು ರಾಜೀನಾಮೆ ನೀಡದಿದ್ದರೆ ರಸ್ತೆಗಿಳಿದು ನಡೆದಾಡಲು ಸಾಧ್ಯವಿಲ್ಲ ಎಂದು ಕೆ. ಮುರಳೀಧರನ್ ಹೇಳಿದ್ದಾರೆ. ರಾಜ್ಯಪಾಲ ಬಿಜೆಪಿಯ ಏಜೆಂಟ್ ಆಗಿದ್ದಾರೆ. ಆರಿಫ್ ಮುಹಮ್ಮದ್ ಖಾನ್‍ರನ್ನು ರಾಜ್ಯಪಾಲರೆಂದು ಕರೆಯಲಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‍ನ ಲಾಂಗ್ ಮಾರ್ಚ್‍ನಲ್ಲಿ ಮುರಳೀಧರನ್ ಮಾತಾಡುತ್ತಿದ್ದರು. ರಾಜ್ಯಪಾಲರು ತಮ್ಮ ಅಂತಸ್ತನ್ನು ಪಾಲಿಸಬೇಕು. ರಾಜ್ಯಪಾಲರು ಮಿತಿ ದಾಟಿದರೆ ನಿಯಂತ್ರಿಸಲು ಮುಖ್ಯಮಂತ್ರಿ ಸಿದ್ಧರಾಗಬೇಕೆಂದು ಮುರಳೀಧರನ್ ಹೇಳಿದರು. ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್‍ರು ಕೂಡ ರಾಜ್ಯಪಾಲರನ್ನು ಬಿಜೆಪಿ ಏಜೆಂಟ್ ಎಂದು ಹೇಳಿದರು.

ಕೇಂದ್ರ ಸರಕಾರದ ತಪ್ಪು ಕ್ರಮಗಳ ವಿರುದ್ಧ ಧ್ವನಿಯೆತ್ತಲು ವಿಧಾನಸಭೆಗೆ ಸ್ವಾತಂತ್ರ್ಯವಿದೆ. ಅದಕ್ಕೆ ಸಂವಿಧಾನಾತ್ಮಕ ಸಾಧ್ಯತೆ ಇದೆಯೇ ಎಂದು ಕಾನೂನು ತಜ್ಞರು ಪರಿಶೀಲಿಸಲಿ. ರಾಜಕಾರಣಿಗಳು ಅಭಿಪ್ರಾಯ ಪ್ರಕಟಿಸುವಂತೆ ರಾಜ್ಯಪಾಲರು ಹೇಳುವುದು ಅಧಿಕೃತ ಸ್ಥಾನಮಾನಕ್ಕೆ ನ್ಯಾಯ ಸಲ್ಲಿಸಿದಂತಾಗುವುದಿಲ್ಲ ಎಂದು ಮುಲ್ಲಪ್ಪಳ್ಳಿ ಹೇಳಿದರು.