ಸನ್ಮಾರ್ಗ ವಾರ್ತೆ
ಭೋಪಾಲ್: ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭೋಪಾಲ್ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಸಂಸ್ಕೃತಿ ಬಚಾವೋ ಮಂಚ್ ಅಧ್ಯಕ್ಷ ಚಂದ್ರಶೇಖರ್ ತಿವಾರಿ, ಹಿಂದೂ ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳಿಂದ ಮುಸ್ಲಿಂ ಉದ್ಯೋಗಿಗಳನ್ನು ತೆಗೆದುಹಾಕುವಂತೆ ಕರೆ ಕೊಟ್ಟಿದ್ದಾರೆ.
ಈ ವಿವಾದಾತ್ಮಕ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಗುಂಡು ಹಾರಿಸಿದ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದ ಅವರು, “ಇವುಗಳಿಗೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗಿದೆ, ಮುಸ್ಲಿಮ್ ಉದ್ಯೋಗಿಗಳು ಲವ್ ಜಿಹಾದ್ ಮಾಡುತ್ತಾರೆ” ಎಂದು ಆರೋಪ ಹೊರಿಸಿದ್ದಾರೆ.
ಪಹಲ್ಗಾಮ್ ದಾಳಿಯ ವಿರೋಧವಾಗಿ ಹಮ್ಮಿಕೊಂಡ ಬಂದ್ ಕುರಿತು ಮಾತನಾಡಿದ ಅವರು, ಬಂದ್ ವಿಫಲವಾಗಬಹುದು, ಎಲ್ಲರೂ ಬಂದ್ ಮಾಡಲಾರರು. ಆದರೆ ಮುಸ್ಲಿಂ ಉದ್ಯೋಗಿಗಳನ್ನು ತೆಗೆದುಹಾಕುವ ಮೂಲಕವೇ ಹಿಂಸೆಯ ಪರಿಣಾಮವನ್ನು ಮುಸ್ಲಿಮರಿಗೆ ಮುಟ್ಟಿಸಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭೋಪಾಲ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ಬಂದ್ಗೆ ಬೆಂಬಲ ವ್ಯಕ್ತಪಡಿಸಿ ಎಲ್ಲಾ ವ್ಯಾಪಾರಸ್ಥರಿಗೆ ಮಾರುಕಟ್ಟೆ ಮುಚ್ಚುವಂತೆ ಕರೆ ನೀಡಿದೆ.
ತಿವಾರಿಯವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿ ಅನಿಲ್ ಶರ್ಮಾ “ಇಂತಹ ಮಾತುಗಳು ಶಾಂತಿಗೆ ಭಂಗ ತರುತ್ತವೆ” ಎಂದು ಖಂಡಿಸಿದರು. ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಖಾನ್, ಭಯೋತ್ಪಾದಕರ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಅಪಾಯಕಾರಿಯಾಗಿದೆ ಎಂದು ಹೇಳಿದರು.












