ಸನ್ಮಾರ್ಗ ವಾರ್ತೆ
ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ಸದ್ಯ ವಿಧಾನ ಸಭಾ ಚುನಾವಣೆಯ ಕಾವು ದಿನನಿತ್ಯ ಜೋರಾಗುತ್ತಿದೆ. ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಫೆಬ್ರುವರಿಯಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಪಾರ್ಟಿ ವಕ್ತಾರ ಸಂಬಿತ್ ಪಾತ್ರ ರವರ ಉಪಸ್ಥಿತಿಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ದಿನೇಶ್ ತ್ರಿವೇದಿಯವರನ್ನು ಸ್ವಾಗತಿಸುತ್ತೇನೆ. ಇಷ್ಟೂ ಕಾಲ ಒಬ್ಬ ಉತ್ತಮ ವ್ಯಕ್ತಿ ಕೆಟ್ಟ ಪಾರ್ಟಿಯಲ್ಲಿದ್ದರು. ಈಗ ಅವರು ಸರಿಯಾದ ಸ್ಥಳಕ್ಕೆ ಬಂದರು ಎಂದು ಜೆಪಿ ನಡ್ಡ ಹೇಳಿದರು.
ತಾನು ಕಾದ ಸುವರ್ಣಾವಕಾಶ ಬಂದಿದೆ ಎಂದು ಬಿಜೆಪಿಗೆ ಸೇರ್ಪಡೆಯಾದ ಮೇಲೆ ತ್ರಿವೇದಿ ಹೇಳಿದರು. ಪಶ್ಚಿಮಬಂಗಾಳದ ಅಕ್ರಮ , ಭ್ರಷ್ಟಾಚಾರ ತೃಣಮೂಲ ಸರಕಾರದ ನೇತೃತ್ವದಲ್ಲಿ ನಡೆಯುತ್ತಿದೆ. ಇದು ಪಶ್ಚಿಮ ಬಂಗಾಳವನ್ನು ಅಂಧಕಾರದ ಯುಗಕ್ಕೆ ಕರೆದೊಯ್ಯತ್ತಿದೆ ಎಂದು ತ್ರಿವೇದಿ ಹೇಳಿದರು.












