ಮಹಿಳಾ ವಿರೋಧಿ ಹೇಳಿಕೆ ಬೆನ್ನಿಗೆ ವ್ಯಾಪಕ ಟೀಕೆ; ಟೊಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಯೊಶಿರೊ ಮೋರಿ ರಾಜೀನಾಮೆ

0
3280

ಸನ್ಮಾರ್ಗ ವಾರ್ತೆ

ಟೋಕಿಯೊ: ಮಹಿಳಾ ವಿರೋಧಿ ಹೇಳಿಕೆ ನೀಡಿದ ಬೆನ್ನಿಗೆ ಟೀಕೆಗೆ ತುತ್ತಾದ ಟೊಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಯೊಶಿರೊ ಮೋರಿ ರಾಜೀನಾಮೆ ನೀಡಿದ್ದಾರೆ. ತನ್ನ ಹೇಳಿಕೆಗೆ ಅವರು ಕ್ಷಮೆ ಯಾಚಿಸಿದ್ದು ನನ್ನ ಹೇಳಿಕೆಗಳು ಸೂಕ್ತವಾದುದಲ್ಲ. ಸಮಸ್ಯೆ ಸೃಷ್ಟಿಸಿತು ಇದಕ್ಕಾಗಿ ತಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಜುಲೈಯಿಂದ ಒಲಿಂಪಿಕ್ಸ್ ನಡೆಸುವುದು ಮುಖ್ಯ ಅದಕ್ಕೆ ನಾನಿರುವುದು ಅಡ್ಡಿಯಾಗಬಾರದೆಂದು ಶುಕ್ರವಾರ ನಡೆದ ವಿಶೇಷ ಸಮಿತಿಯಲ್ಲಿ ಹೇಳಿದರು.

ಯೊಶಿರೊ ಮೋರಿ ಜಪಾನಿನ ಮಾಜಿ ಪ್ರಧಾನ ಮಂತ್ರಿ ಕೂಡ ಆಗಿದ್ದಾರೆ. ಅವರ ಸ್ಥಾನವನ್ನು ತುಂಬುವವರು ಯಾರೆಂದು ಸ್ಪಷ್ಟವಾಗಿಲ್ಲ. ಅವರ ಬದಲಿಗೆ ಪ್ರಸಿದ್ಧ ಸ್ಪೋರ್ಟ್ಸ್ ಅಡ್ಮಿನಿಸ್ಟ್ರೇಟರ್ ಸಬುರೊ ಕವಬೂಚ್ಚಿಯವರನ್ನು ಆಯ್ಕೆ ಮಾಡಿದರೂ ಕೂಡ ಪ್ರತಿಭಟನೆಗೆ ಕಾರಣವಾಯಿತು.

ಸಭೆಗಳಲ್ಲಿ ಮಹಿಳೆಯರು ಲೆಕ್ಕಕಿಂತ ಹೆಚ್ಚು ಮಾತಾಡುತ್ತಾರೆ ಅವರಿಗೆ ಸಂಕ್ಷಿಪ್ತವಾಗಿ ಮಾತಾಡಲು ಬರುವುದಿಲ್ಲ ಎಂದು ಮೊರಿ ಹೇಳಿದ್ದರು. ಇದು ಅವರಿಗೆ ಕುತ್ತು ತಂದಿತು. ಜಪಾನ್ ಮತ್ತು ಜಪಾನಿನ ಹೊರಗೆ ದೊಡ್ಡ ಪ್ರತಿಭಟನೆಗೆ ಕಾರಣವಾಗಿದೆ.

ಟೋಕಿಯೊ 2020 ಒಲಿಂಪಿಕ್ಸ್ ಸಮಿತಿಯ 35 ಸದಸ್ಯರಲ್ಲಿ ಏಳು ಮಂದಿ ಮಹಿಳೆಯರಿದ್ದಾರೆ. ಮಹಿಳಾ ಸದಸ್ಯರು ಮಾತಾಡಲು ಹಿಂಜರಿದಾಗ ಅವರು ಮಾತಾಡುವಂತೆ ಪ್ರೋತ್ಸಾಹಿಸಿದ್ದು ತಾನು ಎಂದು ಮೋರಿ ಹೇಳಿದರು.

ಮೋರಿಯವರ ವಿರುದ್ಧ ಪ್ರತಿಭಟನೆಯ ಭಾಗವಾಗಿ 1,50,000 ಮಂದಿ ಸಹಿ ಸಂಗ್ರಹ ನಡೆದಿತ್ತು. ರಾಜೀನಾಮೆಯ ತೀರ್ಮಾನವನ್ನು ಅಭಿನಂದಿಸಿ ಟೊಕಿಯೊ ಸಿಟಿ ರಾಜ್ಯಪಾಲರ ಸಹಿತ ಪ್ರಮುಖರು ರಂಗ ಪ್ರವೇಶಿಸಿದ್ದಾರೆ.