ತ್ರಿವಳಿ ತಲಾಕ್ ಮಸೂದೆ ವಿರೋಧಕ್ಕೆ ಬೆಂಬಲ ಸೂಚಿಸಿದ ಸಿ ಎಂ ಚಂದ್ರಬಾಬು ನಾಯ್ಡು: ಮುಸ್ಲಿಮ್ ಲಾ ಬೋರ್ಡ್(ಎಐಎಂಪಿಎಲ್ ಬಿ) ನಿಯೋಗ ಭೇಟಿ

0
890

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡುರವರು ಸೋಮವಾರ(24,ಡಿ) ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನಿಯೋಗವನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರಕಾರದಿಂದ ಆದ್ಯಾದೇಶ ಹೋರಡಿಸಲ್ಪಟ್ಟ ಮುಸ್ಲಿಮ್ ಮಹಿಳಾ ಬಿಲ್(ತ್ರಿವಳಿ ತಲಾಕ್)2018 ರ ನಿಯಮಾವಳಿಗಳನ್ನು ವಿರೋಧಿಸಲು ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದರು.‌

1400 ವರ್ಷಗಳ ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಮುಸ್ಲಿಮ್ ಕಾನೂನು ನಿಯಮಾವಳಿಗಳನ್ನು ತಿರುಚಿ ಮಹಿಳಾ ಸಂರಕ್ಷಣೆಯ ಹೆಸರಲ್ಲಿ ಕೌಟುಂಬಿಕ ಹಕ್ಕುಗಳನ್ನು ರಾಜಕೀಯ ಹಿತಾಸಕ್ತಿಗಾಗಿ ಕಸಿಯಲಾಗುತ್ತಿದೆ ಎಂದು ನಿಯೋಗವು ಆರೋಪಿಸಿತು.

ಕೌಟುಂಬಿಕ ನಿಯಮಾವಳಿಗಳಿಗೆ ಕ್ರಿಮಿನಲ್ ಮುಖವಾಡ ತೊಡಿಸುವುದು ಸಂವಿಧಾನ ವಿರೋಧಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ‌. ಕೌಟುಂಬಿಕ ಅಭದ್ರತೆಗೆ ಕಾರಣವಾಗುವ ಸೆರೆಮನೆವಾಸದ ಶಿಕ್ಷೆಯು ತ್ರಿವಳಿ ತಲಾಕ್ ವಿಚಾರದಲ್ಲಿ ಕ್ರಿಮಿನಲಗ ಮೊಕದ್ದಮೆಯಾಗಿ ಬದಲಾಯಿಸುತ್ತಿರುವುದರ ವಿರುದ್ಧ ಹೆಚ್ಚಿನ ಎಲ್ಲ ಪಕ್ಷಗಳೂ ವಿರೋಧ ವ್ಯಕ್ತಪಡಿಸಿವೆ.

ಈ ಸಂದರ್ಭದಲ್ಲಿ ಮುಸ್ಲಿಮರ ಧಾರ್ಮಿಕ ಹಕ್ಕು ಮತ್ತು ಹಿತಾಸಕ್ತಿಗಳನ್ನು ಸಂಸತ್ತಿನಲ್ಲಿ ಉಳಿಸುವಂತೆ ಮೌಲಾನ ಖಾಲಿದ್ ಸೈಫುಲ್ಲಾಹ್, ಝಫರ್ ಗಿಲಾನಿ, ಉಮರೈನ್ ಮೆಹಫೂಝ್, ಮಹಿಳಾ ವಿಭಾಗದ ಅಧ್ಯಕ್ಷೆ ಯಾದ ಡಾ| ಅಸ್ಮಾ ಝಹೀರಾ, ಮೌಲಾನ ಬಾಸಿತ್, ಮೌಲಾನ ಆಸೀಫ್ ನದ್ವೀ, ಮುಫ್ತಿ ಮದ್ ಫಾರೂಕೀ ಖಾಸಿಮ್ ಮತ್ತು ಸೈದಾ ಆಯಿಷಾರರನ್ನು ಒಳಗೊಂಡ ನಿಯೋಗವು ಬೇಡಿಕೆಯನ್ನಿರಿಸಿತು.