ಗೋ ಹಿಂಸೆಗೆ ಮತ್ತೊಂದು ಬಲಿಪಶು

0
839

ಮೂಲ:ರಾಮ್ ಪುನಿಯಾನಿ

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಬಹಳ ಹಿಂದಿನಿಂದಲೂ ಕೋಮು ಹಿಂಸಾಚಾರ ಭಾರತೀಯ ಸಮಾಜದ ಕೆಡುಕಾಗಿದೆ, ಕಳೆದ ಕೆಲವು ದಶಕಗಳಲ್ಲಿ ಇದು ಹದಗೆಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಹಸುಗಳ ವಧೆಗೆ ಸಂಬಂಧಿಸಿದ ಆರೋಪದಲ್ಲಿ ಹಿಂಸಾಚಾರಗಳು ನಡೆಯುತ್ತಿದೆ. ಮೊಹಮ್ಮದ್ ಅಖ್ಲಕ್ ಅವರ ಭೀಕರ ಹತ್ಯೆಯೊಂದಿಗೆ ಪ್ರಾರಂಭವಾಗಿ ಹದಿಹರೆಯದ ಜುನೈದ್ ನನ್ನ ಕೊಲ್ಲುವವರೆಗೆ, ಗೋಮಾಂಸವನ್ನು ‘ದ್ವೇಷದ ಶಸ್ತ್ರ’ ವಾಗಿ ಬಳಸಲಾಗಿದೆ. ಬುಲಂದಶಹರ್ ನಲ್ಲಿ ಎರಡು ಹತ್ಯೆಗಳನ್ನು ಮಾಡುವ ಮೂಲಕ ಈ ಸರಣಿಯು ಮುಂದುವರಿದಿದೆ ಅವರಲ್ಲಿ ಒಬ್ಬರು ಹಿಂದೂ ಪೊಲೀಸ್ ಅಧಿಕಾರಿ.

ಈ ದುರ್ಘಟನೆಯು ಕೋಮು ಹಿಂಸಾಚಾರದ ದುರ್ಬಲತೆಯನ್ನು ತೋರಿಸುತ್ತದೆ, ಇದು ಕಾಲಕ್ರಮೇಣ ಅದರ ಕಕ್ಷೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರವಲ್ಲದೇ ಬಹು ಧರ್ಮೀಯರನ್ನು ಸೇರಿಸುತ್ತಿದೆ. ಇಂತಹ ಹಿಂಸಾಚಾರವು ಬಹು ಸಂಖ್ಯಾತರನ್ನು ಕೊಲ್ಲುವುದನ್ನು ಒಳಗೊಂಡಿರುವುದಿಲ್ಲ, ನರಳುವವರು ಅಲ್ಪಸಂಖ್ಯಾತರಾಗಿರುತ್ತಾರೆ. ಬುಲಂದ್ ಶಹರ್ನಲ್ಲಿ, ಮುಖ್ಯ ಬಲಿಪಶು ಒಬ್ಬ ಹಿಂದೂ ಮಾತ್ರವಲ್ಲ, ರಾಜ್ಯ ಪೊಲೀಸ್ ಅಧಿಕಾರಿ ಕೂಡ, ಮತ್ತೊಂದು ಹಿಂದು ಯುವಕನ ಜೊತೆಯಲ್ಲಿ ಕೊಲ್ಲಲ್ಪಟ್ಟರು.

ತನಿಖೆ ನಡೆಸುತ್ತಿರುವ ಎಸ್ಐಟಿನಿಂದ ಸಂಪೂರ್ಣ ವಿವರಗಳು ಲಭ್ಯವಾಗದಿದ್ದರು , ಮಾಧ್ಯಮ ವರದಿಗಳಿಂದ ಗ್ರಹಿಸಬಹುದಾದ ಸಂಗತಿಯು ಸಾಕಷ್ಟು ಭಯಾನಕವಾಗಿದೆ. ಡಿಸೆಂಬರ್ 2018 ರ ಆರಂಭದಲ್ಲಿ ಬುಲಂದ್ ಶಹರ್ನಲ್ಲಿ ಮುಸ್ಲಿಮರ ಬೃಹತ್ ಸಭೆ, ಇಜ್ತಿಮ ನಡೆಯಿತು. ಲಕ್ಷಾಂತರ ಮುಸ್ಲಿಮರು ಸಭೆಯಲ್ಲಿ ಭಾಗವಹಿಸಿದ್ದರು. ಈ ಧಾರ್ಮಿಕ ಸಭೆಗಳು ನಿಯಮಿತವಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತವೆ.

ಈ ಸಭೆಯ ನಡೆಯುವ ಸ್ಥಳದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿ, ಬುಲಂದ್ ಶಹರ್ ನ ಸಿಯಾನಾ ಗ್ರಾಮದಲ್ಲಿ, ವ್ಯವಸಾಯ ಜಮೀನಿನಲ್ಲಿ ಯಾರೋ ಹಸುವಿನ ಹತ್ಯೆ ಮಾಡಿ ಅವಶೇಷಗಳನ್ನು ಎಸೆದಿದ್ದಾರೆ ಎಂದು ನಿವಾಸಿಗಳ ಗಮನಕ್ಕೆ ಬಂದಿದೆ. ಹಸುವಿನ ಹೆಣವನ್ನು ಗಮನಿಸಿದ ಹಳ್ಳಿಗರು ಪೊಲೀಸರಿಗೆ ವರದಿ ಮಾಡಿದರು,.ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಯೋಚಿಸಲಾಗಿದೆ. ಹೆಣವನ್ನು ಟ್ರಾಕ್ಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮದ ಹೊರಗೆ 40-50 ಯುವಕರು ಟ್ರಾಕ್ಟರ್ ನ ಉಸ್ತುವಾರಿಯನ್ನು ವಹಿಸಿಕೊಂಡರು.

ಕೆಲವು ವರದಿಗಳ ಪ್ರಕಾರ ಭಾರತೀಯ ಜನತಾ ಮೋರ್ಚಾ ಮತ್ತು ಬಜರಂಗ ದಳದ ಸದಸ್ಯರು ಈ ಗೋಮಾಂಸವನ್ನು ಎಸೆದಿದ್ದಾರೆ. ಕೆಲವು ಪತ್ರಕರ್ತರ ವರದಿಗಳು, ವೀಡಿಯೊ ಸೇರಿದಂತೆ, ಇಡೀ ಘಟನೆಯನ್ನು ಹೊರಗಿನವರಿಂದ ಏರ್ಪಡಿಸಲಾಗಿದೆಯೆಂದು ತೋರಿಸುತ್ತದೆ.

ಈ ಯುವಕರು ಟ್ರಾಕ್ಟರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ಎಫ್ಐಆರ್ ದಾಖಲಿಸಿದರು. ಎಫ್ಐಆರ್ ದಾಖಲಿಸಿದ್ದ ಭಜರಂಗದಳದ ಸ್ಥಳೀಯ ಮುಖ್ಯಸ್ಥ ಯೋಗೇಶ್ ರಾಜ್ ಈ ಘಟನೆಯಲ್ಲಿ ಪ್ರಧಾನ ಆರೋಪಿ ಎಂದು ಗುರುತಿಸಲಾಗಿದೆ .

ಇದರ ನಂತರ ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಅವರ ಕ್ರೂರ ಹತ್ಯೆಗೆ ಯಾವುದು ಕಾರಣವಾಯಿತು. ಆರ್ ಎಸ್ಎಸ್ ಗೆ ನಿಕಟವರ್ತಿಯಾದ ಬಲಪಂಥೀಯ ಚಾನಲ್ ಸುದರ್ಶನ್ ಟಿ.ವಿ.ಯ ಸುರೇಶ್ ಚವಂಗೆ ಮುಸ್ಲಿಮರ ಇಜ್ತಿಮಕ್ಕೆ ಹಿಂಸಾಚಾರವನ್ನು ಜೋಡಿಸಲು ಯತ್ನಿಸಿದರು. ಚಾವಂಕೆ ಅವರ ಟ್ವೀಟ್ ಪ್ರಕಾರ ಇಜ್ತಿಮದಲ್ಲಿ ಭಾಗವಹಿಸಿದ ಮುಸ್ಲಿಮರು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದನ್ನು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ ಮತ್ತು ಈ ಘಟನೆಯು ಇಜ್ತಿಮದೊಂದಿಗೆ ಯಾವ ಸಂಬಂಧವನ್ನು ಹೊಂದಿಲ್ಲ . ಇಜ್ತಿಮವೂ ಘಟನೆ ನಡೆದ ಸ್ಥಳದಿಂದ ಅತೀ ದೂರದಲ್ಲಿ ನಡೆದ ಶಾಂತಿಯುತ ಕಾರ್ಯಕ್ರಮವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಜರಂಗದಳದ ಯೋಗೇಶ್ ರಾಜ್ ಸಲ್ಲಿಸಿದ ಎಫ್ಐಆರ್ ನಲ್ಲಿ ಹಲವಾರು ಮುಸ್ಲಿಮರನ್ನು ಹೆಸರಿಸಲಾಯಿತು, ಆದರೆ ಅವರು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲವೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಇತರರ ಹೆಸರುಗಳು ತಳಕು ಹಾಕಿದವು, ಕಾಶ್ಮೀರದಲ್ಲಿ ಹುದ್ದೆಯಲ್ಲಿರುವ ರಾಷ್ಟ್ರೀಯ ರೈಫಲ್ ನ ಭಾಗವಾಗಿರುವ ಜಿತೇಂದ್ರ ಮಾಲಿಕ್ ಎಂಬಾತ ಸ್ಥಳದಲ್ಲೇ ಹಾಜರಿದ್ದರು ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರ ಹಿರಿಯ ಸಹೋದರ ಈ ಆರೋಪವನ್ನು ನಿರಾಕರಿಸಿದರು ಮತ್ತು ತನ್ನ ಸಹೋದರನ ಮುಗ್ಧತೆಯನ್ನು ಸಾಬೀತುಪಡಿಸುವ ಭರವಸೆ ನೀಡಿದರು. ಕಾಶ್ಮೀರದ ಕರ್ತವ್ಯದಿಂದ ಮಲಿಕ್ ಅವರನ್ನು ಹಿಂದಕ್ಕೆ ಕರೆತರಲಾಯಿತು, ಆದರೆ ಅವರ ಭಾಗಿಯಾಗುವಿಕೆ ಬಗ್ಗೆ ಹೆಚ್ಚಿನದೇನೂ ಸಾಬೀತಾಗಲಿಲ್ಲ.

ಉಳಿದಿರುವ ಸಾಮಾನ್ಯ ಪ್ರಶ್ನೆಯೇನೆಂದರೆ ಯಾರು ಅದನ್ನು ಮಾಡಿದರು? ಅದಕ್ಕೂ ಮೊದಲು ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಗೆ ಸಂಬಂಧಿಸಿದ ಅತ್ಯಂತ ಬಹಿರಂಗ ಸತ್ಯಗಳನ್ನು ನೋಡೋಣ, ಅವರು ತಮ್ಮ ಸಹೋದರಿಯ ಪ್ರಕಾರ ಯೋಜಿತ ರೀತಿಯಲ್ಲಿ ಕೊಲ್ಲಲ್ಪಟ್ಟರು. ಮೊಹಮ್ಮದ್ ಅಖ್ಲಕ್ ಪ್ರಕರಣದಲ್ಲಿ ಸಿಂಗ್ ರು ತನಿಖಾ ಅಧಿಕಾರಿಯಾಗಿದ್ದ ಕಾರಣ, ಅನೇಕ ಅಪರಾಧಿಗಳ ಬಂಧನಕ್ಕೆ ಕಾರಣವಾಯಿತು. ಹಿಂದೂ-ಮುಸ್ಲಿಂ ವಿಚಾರಗಳ ಬಗ್ಗೆ ಅವರು ಯಾವಾಗಲೂ “ಸರಿಯಾದ ನಿಲುವನ್ನು ಹೊಂದಿದ್ದರು” ಎಂದು ಹೇಳಲಾಗಿದೆ. ಬಹುಶಃ ಅವರು ಹಿಂದುತ್ವ ಗುಂಪುಗಳ ವಿಭಜನೆ ನೀತಿಗೆ ಅವಕಾಶ ನೀಡಲಿಲ್ಲ.

ಬಿಜೆಪಿ ಸಂಬಂಧಿತ ಸಂಘಟನೆಗಳ ಸ್ಥಳೀಯ ಘಟಕಗಳು ಸಿಂಗ್ ಅವರನ್ನು ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ತನಿಖೆ ನಡೆಯುತ್ತಿರುವಾಗ ಸುಬೋಧ್ ಸಿಂಗ್ ಕೊಲೆಗೆ ಸಂಬಂಧಿಸಿದ ಪುರಾವೆಗಳನ್ನು ನಾಶಪಡಿಸ ಬಹುದೆಂದು ಅವರ ಪತ್ನಿ ಭೀತರಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ಇತರ ಪ್ರಮುಖ ಅಂಶಗಳು- ಒಂದು, ಇಜ್ತಿಮದಲ್ಲಿ ಭಾವಹಿಸಲು ಬಂದಿದ್ದ ಅನೇಕರಿಗೆ ಶಿವ ದೇವಾಲಯದಲ್ಲಿ ಆಶ್ರಯ ನೀಡಲಾಗಿದೆ. ನಂತರ, ಸಿಂಗ್ ಅವರ ಹದಿಹರೆಯದ ಮಗ ಅಭಿಷೇಕ್ ಆ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮನವಿ ಮಾಡಿದರು.

ಪ್ರತಿಕ್ರಿಯೆಯಾಗಿ, ಉಪ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಫೇಸ್ಬುಕ್ ಪೋಸ್ಟ್ನಲ್ಲಿ ಹೀಗೆಂದು ಹೇಳಿದ್ದಾರೆ, “ನಾನು ಅಭಿಷೇಕ್ ನನ್ನು ಅಭಿನಂದಿಸುತ್ತೇನೆ. ಅವರು ತಂದೆಯನ್ನು ಕಳೆದುಕೊಂಡ ನಂತರವು ಸಹ ದ್ವೇಷ ಮತ್ತು ಹಿಂಸೆಯ ಭಾಷೆ ಮಾತನಾಡುವುದಿಲ್ಲ.”

ಮತ್ತೊಂದೆಡೆ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್, ಈ ದುರಂತದ ನಂತರ, ಗೋಹತ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಹಸುವಿನ ವಧೆ ಮತ್ತು ಹಸುವಿನ ಕಳ್ಳಸಾಗಾಣಿಕೆ ಪತ್ತೆಹಚ್ಚಲು ವಿಫಲರಾದ ಕಾರಣಕ್ಕೆ ಸಿಂಗ ರು ದಾಳಿಗೊಳಗಾಗಿದ್ದರೆ…ಎಂದು ಪರೀಕ್ಷಿಸಲು ತನಿಖಾ ತಂಡಕ್ಕೆ ಅವರು ಆದೇಶ ನೀಡಿದ್ದಾರೆ.

ಸಿಂಗರ ಕೊಲೆಯನ್ನು ಯೋಗಿ ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಏತನ್ಮಧ್ಯೆ, ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಯಂತ್ರಗಳು ಕುಸಿದಿದೆ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು 83 ನಿವೃತ್ತ ಅಧಿಕಾರಿಗಳು ಜಂಟಿ ಪತ್ರದಲ್ಲಿ ಹೇಳಿದ್ದಾರೆ.

ಹಿಂಸೆಯ ಮಾದರಿಗಳಲ್ಲಿ, ಬುಲಂದ್ ಶಹರ್ ಪ್ರಾಯಶಃ ಯೋಜಿತ ಹಿಂಸಾಚಾರದ ಮತ್ತೊಂದು ಮಾದರಿಯಾಗಿದೆ. ಅಲ್ಲಿ ಹೆಚ್ಚಿನ ಬಲಿಪಶುಗಳು ಬಹುಸಂಖ್ಯಾತರಾಗಿರಬಹುದು. ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಗೋ ರಾಜಕೀಯದ ಮತ್ತೊಂದು ಬಲಿಪಶುವಷ್ಟೆ.

ಕೃಪೆ: ದಿ ಸಿಟಿಜನ್ ಡಾಟ್ ಇನ್