ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಫೆ. 1: 2020ರಲ್ಲಿ ಅಂಗೀಕರಿಸಿದ ಇರಾಕ್ ಯುದ್ಧ ಪ್ರಕ್ರಿಯೆಯನ್ನು ಹಿಂಪಡೆಯಲು ಅಮೆರಿಕ ಪಾರ್ಲಿಮೆಂಟಿನಲ್ಲಿ ಮತದಾನ ನಡೆದಿದೆ. ಇದಕ್ಕೆ ಅಗತ್ಯ ಸೂಚನೆಯನ್ನು ಕಾಂಗ್ರೆಸ್ನಲ್ಲಿ ಅಂಗೀಕರಿಸಲಾಗಿದೆ. ಮಾತ್ರವಲ್ಲ ಅನುಮತಿಯಿಲ್ಲದೇ ಇರಾನ್ ವಿರುದ್ಧ ಕ್ರಮ ಜರಗಿಸುವುದಕ್ಕೆ ತೆರಿಗೆಯ ಹಣವನ್ನು ವಿನಿಯೋಗಿಸದಂತೆ ತಡೆಯಲು ಕಾಂಗ್ರೆಸ್ ಸೂಚನೆ ಮುಂದಿಟ್ಟಿದೆ. ಇರಾಕ್ ಯುದ್ಧ ಹಿಂಪಡೆಯಬೇಕೆಂಬ ಪ್ರಸ್ತಾವದ ಪರವಾಗಿ 236 ಮತಗಳು ಚಲಾವಣೆಯಾದರೆ 166 ಮತಗಳು ವಿರುದ್ಧವಾಗಿ ಚಲಾವಣೆಯಾದುವು. ಇರಾನ್ ಯುದ್ಧಕ್ಕೆ ಹಣ ತಡೆಯುವ ಪ್ರಸ್ತಾವದ ಪರವಾಗಿ 175 ಮತಗಳು ಚಲಾವಣೆಯಾದರೆ ವಿರುದ್ಧವಾಗಿ 228 ಮತಗಳು ಚಲಾವಣೆಯಾದುವು.
ಇರಾನ್ನ ವಿರುದ್ಧ ಹೆಚ್ಚಿನ ಸೈನಿಕ ಕ್ರಮಗಳನ್ನು ಕೈಗೊಳ್ಳುವ ಮೊದಲು ಅಧ್ಯಕ್ಷ ಟ್ರಂಪ್ ಕಾಂಗ್ರೆಸ್ ಅನುಮತಿ ಪಡೆಯಬೇಕೆಂದು ಜನವರಿ 9ಕ್ಕೆ ಮತದಾನ ನಡೆದಿತ್ತು. ನಂತರ ಈ ಪ್ರಕ್ರಿಯೆ ನಡೆದಿದೆ. ಅಮೆರಿಕ ಸೆನೆಟ್ನಲ್ಲಿ ಟ್ರಂಪ್ ವಾಗ್ದಂಡನೆ ಕ್ರಮಗಳನ್ನು ಎದುರಿಸುತ್ತಿದ್ದಾರೆ. ಡೆಮಕ್ರಾಟ್ಗಳು ಬಹುಸಂಖ್ಯಾತರಾಗಿರುವ ಸಭೆಯಲ್ಲಿ ಮತದಾನ ನಡೆದಿದೆ.












