ಸನ್ಮಾರ್ಗ ವಾರ್ತೆ
ನ್ಯೂಝಿಲ್ಯಾಂಡ್: ನ್ಯೂಝಿಲ್ಯಾಂಡ್ ನ ದೂರದ ಕೆರ್ಮಾಡೆಕ್ ದ್ವೀಪದ ಬಳಿ ಎರಡು ಪ್ರಬಲ ಭೂಕಂಪಗಳ ನಂತರ ಮೂರನೇ ಬಾರಿ 8.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಸುನಾಮಿಯ ಸೂಚನೆಗಳು ಲಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ನ್ಯೂ ಕ್ಯಾಲೆಡೋನಿಯಾ ಮತ್ತು ವನವಾಟುವಿನ ಸಮುದ್ರ ತೀರಗಳಲ್ಲಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿತರಿಸುವ ಕಾರ್ಯಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಪೆಸಿಫಿಕ್ ಪ್ರದೇಶದ ರಾಷ್ಟ್ರಗಳಾದ ವನವಾಟು ಮತ್ತು ಫ್ರೆಂಚ್ ಭೂ ಪ್ರದೇಶವಾದ ನ್ಯೂ ಕ್ಯಾಲೆಡೋನಿಯಾದಲ್ಲಿ ಮೂರು ಮೀಟರ್ (10 ಅಡಿ) ಅಲೆಗಳು ಏಳುವ ಸಾಧ್ಯವಿದೆ ಎಂದು ಎಚ್ಚರಿಕೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಎರಡು ಪ್ರಬಲ ಭೂಕಂಪಗಳ ನಂತರ ಮೂರನೇ ಬಾರಿ 8.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಬಳಿಕ ಲಭ್ಯವಿರುವ ಎಲ್ಲ ದತ್ತಾಂಶಗಳ ಆಧಾರದ ಮೇಲೆ, ಕೆಲವು ಕರಾವಳಿಗಳಿಗೆ ಅಪಾಯಕಾರಿ ಸುನಾಮಿ ಅಲೆಗಳ ಮುನ್ಸೂಚನೆ ಇದೆ “ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಹೇಳಿದೆ. ಜಪಾನ್, ರಷ್ಯಾ, ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕಾದ ಕರಾವಳಿಯ ಕೆಲವು ಭಾಗಗಳಲ್ಲಿಯೂ ಸಣ್ಣ ಅಲೆಗಳು ಏಳುವ ಸಾಧ್ಯವಿದೆ ಎಂದು ಎಚ್ಚರಿಕೆ ನೀಡಿದೆ.
2004ರ, ಡಿಸೆಂಬರ್ 26ರಂದು ರಲ್ಲಿ ಭಾರತ, ಶ್ರೀಲಂಕಾ, ಇಂಡೋನೇಷ್ಯಾ ದಲ್ಲಿ ಎದ್ದಿದ್ದ ಸುನಾಮಿ ಅಲೆಯು ಅಪಾರ ಸಾವು ನೋವು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












