ಭಯೋತ್ಪಾದನೆ : 11 ಮಂದಿ ಮುಸ್ಲಿಂ ಯುವಕರಿಗೆ ಜಾಮೀನು: ಉತ್ತರ ಪ್ರದೇಶದ ಪೊಲೀಸರಿಗೆ ಮುಖಭಂಗ

0
543

ಸನ್ಮಾರ್ಗ ವಾರ್ತೆ

ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿ ಬಂಧಿಸಲಾಗಿದ್ದ 11 ಮಂದಿ ಮುಸ್ಲಿಂ ಯುವಕರಿಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಜಾಮೀನು ನೀಡಿದೆ. 598 ದಿನಗಳ ಕಾಲ ಜೈಲಲ್ಲಿ ಕಳೆದ ಬಳಿಕ ಅವರಿಗೆ ಈ ಜಾಮೀನು ಲಭಿಸಿದೆ.

ಅಲ್ ಕಾಯಿದ ಸಹಿತ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವನ್ನು ಆರೋಪಿಸಿ 11 ಮಂದಿ ಯುವಕರ ವಿರುದ್ಧ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಬಂಧಿಸಿತ್ತು.

ಆದರೆ ಇವರ ವಿರುದ್ಧ ದೋಷಾರೋಪಣೆ ಮಾಡಲು ಯಾವುದೇ ಸಾಕ್ಷ ಲಭಿಸಿಲ್ಲ ಎಂದು ಕೋರ್ಟು ಹೇಳಿದೆ. ಇವರ ವಿರುದ್ಧ ಯಾವುದೇ ಪುರಾವೆಯನ್ನು ಪ್ರಾಸೀಕ್ಯೂಷನ್ ಗೆ ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ಇನ್ನೂ ಇವರು ಕಸ್ಟಡಿಯಲ್ಲಿರುವುದು ಬೇಡ ಅವರಿಗೆ ಜಾಮೀನು ಕೊಡುತ್ತಿದ್ದೇವೆ ಎಂದು ದ್ವಿ ಸದಸ್ಯ ಪೀಠ ಹೇಳಿದೆ.