ಯುಎಇ ರಾಜಕುಮಾರಿಯ ಟ್ವೀಟ್ ಹಿನ್ನೆಲೆ: ಝೀ ನ್ಯೂಸ್‌ನ ಸುಧೀರ್ ಚೌಧರಿಯನ್ನು ಕಾರ್ಯಕ್ರಮದಿಂದ ಹೊರಗಿಟ್ಟ ಆಯೋಜಕರು

0
1518

ಸನ್ಮಾರ್ಗ ವಾರ್ತೆ

ಅಬುಧಾಬಿ: ದ್ವೇಷ ಪೂರಿತ ವಾರ್ತೆಗಳ ಮೂಲಕ ನಿರಂತರ ವಿವಾದ ಸೃಷ್ಟಿಸಿದ ಝೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿಯನ್ನು ಅಬುಧಾಬಿಯ ಕಾರ್ಯಕ್ರಮದಿಂದ ಹೊರಗಿಡಲಾಗಿದೆ ಎಂಬುದಾಗಿ ವರದಿಯಾಗಿದೆ. ರಾಜಕುಮಾರಿ ಹಿಂದ್ ಫೈಸಲ್ ಅಲ್ ಖಾಸಿಂ, “ತನ್ನ ಶಾಂತಿಯ ನಾಡಿಗೆ ಅಸಹಿಷ್ಣುವಾದ ಈ ಭಯೋತ್ಪಾದಕನನ್ನು ಕರೆತರುತ್ತಿದ್ದೀರಿ? ಯುಎಇಗ ಇಂತಹ ದ್ವೇಷಿಗಳನ್ನು ಸ್ವಾಗತಿಸುವುದಿಲ್ಲ” ಎಂದು ಹಿಂದ್ ಟ್ವೀಟ್ ಮಾಡಿದ್ದಾರೆ.

ಅಬುದಾಭಿ ಚಾರ್ಟೆಡ್ ಅಕೌಂಟ್ ಒಕ್ಕೂಟವು ನವೆಂಬರ್ 25, 26ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರನಾಗಿ ಚೌಧರಿಯವರಿಗೆ ಆಹ್ವಾನ ನೀಡಲಾಗಿತ್ತು. ರಾಜಕುಮಾರಿ ವಿರೋಧ ವ್ಯಕ್ತಪಡಿಸಿದ ಬೆನ್ನಿಗೆ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದ್ದು, ಇದನ್ನು ರಾಜಕುಮಾರಿಯವರೇ ತಿಳಿಸಿದ್ದಾರೆ.

ಸಿಎಎ ವಿರೋಧಿ ಹೋರಾಟವನ್ನು ಸುಧೀರ್ ಭಯೋತ್ಪಾದನೆ ಎಂಬಂತೆ ಚಿತ್ರಿಕರಿಸಿದ್ದರು. ಕೊರೋನದ ಆರಂಭಿಕ ಕಾಲದಲ್ಲಿ ತಬ್ಲೀಗ್ ಜಮಾಅತ್ ವಿರುದ್ಧ ಝೀ ನ್ಯೂಸ್ ನಿಂತರ ತೇಜೋವಧೆ ನಡೆಸಿತ್ತು. ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಸುಳ್ಳು ವರದಿಯನ್ನು ತನ್ನ ಚ್ಯಾನೆಲ್ ಮೂಲಕ ಚೌಧರಿ ನಿರಂತರ ಪ್ರಸಾರ ಮಾಡಿದ್ದರು.

“ಸುಧೀರ್ ಚೌಧರಿಯ ಅಬುಧಾಬಿ ಚಾರ್ಟೆಡ್ ಅಕೌಂಟೆಂಟ್ ಪ್ಯಾನೆಲ್ ಹೊರಗಿಟ್ಟಿದೆ ಎಂದು ಇನ್ಸಿಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಟೆಂಟ್ಸ್ ಆಫ ಇಂಡಿಯಾ(ಐಡಿಎಐ) ಅಬುಧಾಬಿ ಚಾಪ್ಟರ್ ಸದಸ್ಯರು ಬರೆದ ಪತ್ರದ ಪ್ರತಿಯನ್ನೂ ರಾಜಕುಮಾರಿ ಟ್ವೀಟ್ ಮಾಡಿದರು.

“ನಕಲಿ ವರದಿಗಳು, ಇಸ್ಲಾಮೊಫೋಬಿಯ ಕೋಮು ವಿದ್ವೇಷ, ನಕಲಿ ದಾಖಲೆ ತಯಾರು ಮಾಡಿದ ವಿಷಯದಲ್ಲಿ ಚೌಧರಿ ಆರೋಪಿಯಾಗಿದ್ದಾರೆ. ಪ್ರಮುಖ ಪ್ರೊಫೇಶನಲ್ ಸಂಘಟನೆ, ಪ್ರೊಫೆಶನಲ್ ಅಲ್ಲದ ಒಬ್ಬ ಪತ್ರಕರ್ತನಿಗೆ ವೇದಿಕೆ ನೀಡಿ ನಮ್ಮ ನಾಡಿ ಗೌರವ, ಅಂತಸ್ತನ್ನು ಕಡಿಮೆ ಮಾಡುವುದಾ ಎಂದು ರಾಜಕುಮಾರಿ ಪ್ರಶ್ನಿಸಿದ್ದಾರೆ. ನಂತರ ಸುಧೀರ್ ಚೌಧರಿಯವರನ್ನು ಕಾರ್ಯಕ್ರಮದಿಂದ ಹೊರಗಿಡಲಾಯಿತು.” ಎಂದು ರಾಜಕುಮಾರಿ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟು ಕಠೋರ ಇಸ್ಲಾಮೋ ಫೋಬಿಕ್ ಶೋಗಳಿಗೆ ಹೆಸರುವಾಸಿಯಾದ ಬಲಪಂಥೀಯ ಆ್ಯಂಕರ್ ಖ್ಯಾತಿಗೆ ಸುಧೀರ್ ಚೌಧರಿ ಹೆಸರುವಾಸಿಯಾಗಿದ್ದಾರೆ. ಅವರ ಪ್ರೈಂ ಟೈಮ್ ಶೋಗಳು ಮುಸ್ಲಿಮರನ್ನು ಆಕ್ರಮಿಸಲು ಪ್ರೇರೇಪಿಸುವ ರೀತಿಯಲ್ಲಿವೆ. ನೀವು ಯಾಕೆ ಅಸಹಿಷ್ಣುವಾದ ಒಬ್ಬ ಭಯೋತ್ಪಾದಕನನ್ನು ಯುಎಇಗೆ ಕರೆತರುವುದು. ಶಾಂತವಾದ ನನ್ನ ದೇಶಕ್ಕೆ ನೀವು ಇಸ್ಲಾಮೊಫೋಬಿಯ ಮತ್ತು ದ್ವೇಷವನ್ನು ಯಾಕೆ ತರುತ್ತಿದ್ದೀರಿ ಎಂದು ರಾಜಕುಮಾರಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.