ಪಠಾಣ್ ಕೋಟ್ ಸೇನಾ ನೆಲೆಯ ಮೇಲೆ ಗ್ರೆನೇಡ್ ದಾಳಿ

0
328

ಸನ್ಮಾರ್ಗ ವಾರ್ತೆ

ಪಠಾಣ್ ಕೋಟ್: ಪಂಜಾಬಿನ ಪಠಾಣ್ ಕೋಟ್ ಸೇನಾ ನೆಲೆಯ ಮೇಲೆ ಮೂರು ಗ್ರೆನೇಡ್ ದಾಳಿದೊವೆ. ದಿರುಪುಲ್‍ನ ಸೇನೆಯ ತ್ರಿವೇಣೀ ಗೇಟ್‍ನ ಮುಂದೆ ಗ್ರೆನೇಡ್‍ಗಳು ಬಂದು ಬಿದ್ದಿವೆ ಎಂದು ಗೃಹಸಚಿವಾಲಯ ತಿಳಿಸಿತು.

ಅಜ್ಞಾತರು ಸೈನಿಕ ಕೇಂದ್ರ ಮೇಲೆ ಗ್ರೆನೆಡ್ ಎಸದಿದ್ದಾರೆ. ಒಂದು ಮದುವೆಯ ಮೆರವಣಿಗೆ ಹಾದು ಹೋಗುವಾಗ ಗ್ರೆನೆಡ್ ಎಸೆಯಲಾಗಿದೆ ಎಂದು ಸೈನಿಕ ಮೂಲಗಳು ತಿಳಿಸಿವೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು ಚೆಕ್‍ಪೋಸ್ಟ್‌ಗೆ ಭಾರಿ ಭದ್ರತೆ ಒದಗಿಸಲು ಸೂಚನೆ ನೀಡಿಲಾಗಿದೆ ಎಂದು ಪೊಲೀಸರು ತಿಳಿಸಿದರು. ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. ಗ್ರೆನೆಡ್‌ನ ಕೆಲವು ಭಾಗಗಳು ಘಟನಾ ಸ್ಥಳದಿಂದ ವಶಪಡಿಸಲಾಗಿದ್ದು, ಪ್ರಕರಣದಲ್ಲಿ ತನಿಖೆ ಜಾರಿಯಲ್ಲಿದೆ‌.