ಗಿನ್ನೆಸ್ ಬುಕ್‍ನಲ್ಲಿ ಸ್ಥಾನ ಪಡೆದ ರೋಷ್ನಿಯ ಕಾರ್ಟೂನ್ ಸ್ಟ್ರಿಪ್

0
538

ಸನ್ಮಾರ್ಗ ವಾರ್ತೆ

ಯುಎಇ: ದುಬೈ ಗ್ಲೋಬಲ್ ವಿಲೇಜಿನ ಆರ್ಟ್ ಗ್ಯಾಲರಿಯಲ್ಲಿ 498 ಪೇಪರ್‌ಗಳನ್ನು ಸೇರಿಸಿ ರೋಷ್ನಿ(19) ರೂಪು ನೀಡಿದ ಅತೀ ದೊಡ್ಡ ಕಾರ್ಟೂನ್ ಸ್ಟ್ರಿಪ್ ಗಿನ್ನೆಸ್ ಬುಕ್ ರೆಕಾರ್ಡಿನಲ್ಲಿ ಸ್ಥಾನ ಪಡೆದುಕೊಂಡಿದೆ. ದುಬೈ ಗ್ಲೊಬಲ್ ವಿಲೇಜ್ ಕೊನೆಗೊಂಡು ಒಂದು ತಿಂಗಳಾಯಿತು. ಕಳೆದ ಶನಿವಾರ ರೋಷ್ನಿಯ ಕಾರ್ಟೂನ್ ಸ್ಟ್ರಿಪ್ ಗಿನ್ನೆಸ್ ಬುಕ್‍ನಲ್ಲಿ ಸ್ಥಾನ ಪಡೆದಿದೆ ಎಂಬ ಸುದ್ದಿ ವರದಿಯಾಗಿತ್ತು.

ಕಾರ್ಟೂನಿಸ್ಟ್ ಆದ ತಂದೆ ಎಂ‌.ದಿಲೀಫ್ ಗ್ಲೋಬಲ್ ವಿಲೇಜಿನ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಬರೆಯಲು ಬಂದಾಗ ರೋಷ್ನಿಯ ತಲೆಯಲ್ಲಿ ಹೊಸ ಐಡಿಯಾ ಹೊಳೆದಿತ್ತು. ಗ್ಲೋಬಲ್ ವಿಲೇಜಿನ ಎಂಟ್ರಾನ್ಸ್‍ನಿಂದ ಹಿಡಿದು ಎಲ್ಲ ಸ್ಟಾಲ್‍ಗಳು, ಪವಿಲಿಯನ್‍ಗಳ ಒಂದೊಂದು ಪೇಪರಗಳಲ್ಲಿ ರೋಷ್ನಿ ಚಿತ್ರ ಬರೆದಿದ್ದಾಳೆ. ದಿನಾಲು 12 ಗಂಟೆ ಚಿತ್ರ ರಚನೆ. ಹೀಗೆ ಇಪ್ಪತ್ತು ದಿವಸಗಳಲ್ಲಿ 30 ಜಿಎಸ್‍ಎಂ ಕಾಟ್ ಪೇಪರ್ ಮತ್ತು 500 ಕ್ಯಾಲಿಗ್ರಾಫಿ ಪೆನ್ನುಗಳನ್ನು ಇದಕ್ಕಾಗಿ ರೋಷ್ನಿ ಉಪಯೋಗಿಸಿದ್ದಾಳೆ.

ಎಲ್ಲವನ್ನು ಜೋಡಿಸಿದಾಗ 404 ಮೀಟರ್ ಉದ್ದವಾಯಿತು. ಹೀಗೆ ಪಾಕಿಸ್ತಾನದ ಬಾಲಕಿ ಉನೈಸ್ ಅಲಿ ಬಾರ್‍ಲೆಸ್‍ಳ 350 ಮೀಟರ್ ಕಾರ್ಟೂನ್ ಸ್ಟ್ರಿಪ್ ದಾಖಲೆಯನ್ನು ರೋಷ್ನಿ ಮುರಿದಿದ್ದಾಳೆ. ಇದರ ನಡುವೆ ತಂದೆಯ ಜೊತೆ ಲೈವ್ ಕ್ಯಾರಿಕೇಚರ್ ಬರೆಯುತ್ತಿದ್ದಳು. ದಿನಾಲು ಹದಿನೈದು ಮಂದಿಯ ಚಿತ್ರವನ್ನು ಬರೆದಿದ್ದಳು. ಕೇರಳದ ಕೋಝಿಕ್ಕೋಡ್ ಎಂಇಎಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ರೋಷ್ನಿ ಈಗ ಗಿನ್ನೆಸ್ ದಾಖಲೆಗೆ ಯತ್ನ ನಡೆಸುತ್ತಿದಾಳೆ. 2015ರ ವಿಧಾನಸಭೆಗೆ ಕೊಡುವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ ಉಮ್ಮರ್ ಮಾಸ್ಟರ್‌ರ ಬೃಹತ್ ಕ್ಯಾರಿಕೇಚರ್ ಈ ವಿದ್ಯಾರ್ಥಿನಿ ರಚಿಸಿದ್ದಳು. 12 ಮೀಟರ್ ಉದ್ದ ಏಳು ಮೀಟರ್ ಅಗಲದ ಪೋಸ್ಟರ್ ಅಂದು ಚರ್ಚೆಯಾಗಿತ್ತು.

ರೋಷ್ನಿಯ ತಂದೆ ದಿಲೀಫ್ ಯುಎಇಯ ಪ್ರಸಿದ್ಧ ಚಿತ್ರ ಕಲಾವಿದರಾಗಿದ್ದಾರೆ. ಇವರು ಮೂವತ್ತೆರೆಡು ಸಲ ಗಿನ್ನೆಸ್ ಬುಕ್‍ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2016ರಲ್ಲಿ ಜಗತ್ತಿನ ಅತ್ಯಂತ ದೊಡ್ಡ ಬ್ಯಾಡ್ಮಿಂಟನ್ ರ್ಯಾಕೆಟ್‍ನ ಇನ್‍ಸ್ಟಾಲೇಶನ್ ತಯಾರಿಸಿದ್ದರು. 15 ಮೀಟರ್ ಎತ್ತರದ ರ್ಯಾಕೆಟ್‍ಗೆ ಗಿನ್ನೆಸ್ ಬುಕ್‍ನಲ್ಲಿ ಜಾಗ ಸಿಕ್ಕಿತ್ತು. ಕಳೆದ ವರ್ಷ ದುಬೈಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಮಾರ್‍ಕರ್ ಪೆನ್ ನಿರ್ಮಿಸಿ ದಾಖಲೆ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮೂರು ಮೀಟರ್ ಉದ್ದ ಮತ್ತು 13 ಇಂಚು ದಪ್ಪದ ಮಾರ್ಕರ್ ಪೆನ್ ಇದಾಗಿದೆ.

ದಿಲೀಪ್ ಆರ್ಟ್ ಗ್ಯಾಲರಿಯನ್ನು ಹೊಂದಿರುವ ದಿಲೀಪರ ರಚನೆಗಳನ್ನು ಏಳನೇ ತರಗತಿಯಿಂದಲೇ ಗಮನಿಸುತ್ತಿದ್ದ ರೋಷ್ನಿ ಚಿತ್ರ ಬರೆಯಲು ತೊಡಗಿದ್ದಳು. ಈಕೆ ಆನ್‍ಲೈನ್‍ನಲ್ಲಿ 25 ಮಕ್ಕಳಿಗೆ ಚಿತ್ರ ರಚನೆಯನ್ನು ಹೇಳಿಕೊಡುತ್ತಿದ್ದಾಳೆ. ರೊಚಾರ್ಟ್ ಎಂಬ ಹೆಸರಿನ ಯುಟ್ಯೂಬ್ ಚ್ಯಾನೆಲ್ ಇದ್ದು ರೋಷ್ನಿಯ ತಾಯಿ ಝುಬೈದ, ರಹ್ನಾ ರನಾ, ರಯ ರೋಷ್ನಿಯ ಸಹೋದರಿಯರು.