ಯುಎಇ: ರಮಝಾನ್‍ನಲ್ಲಿ ಸರಕಾರಿ ಕಚೇರಿಗಳು 9 ಗಂಟೆಯಿಂದ 2 ಗಂಟೆಯವರೆಗೆ ಮಾತ್ರ

0
586

ದುಬೈ,ಮೇ 3: ರಮಝಾನ್‍ನಲ್ಲಿ ಯುಎಇಯ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಉದ್ಯೋಗಿಗಳ ಕೆಲಸದ ಸಮಯವನ್ನು ಐದು ಗಂಟೆಗೆ ಸೀಮಿತಗೊಳಿಸಲಾಗಿದೆ. ಎಲ್ಲ ಸಚಿವಾಲಯಗಳು, ಫೆಡರಲ್ ಸಂಸ್ಥೆಗಳ ಕೆಲಸದ ಸಮಯ ಇದೇ ರೀತಿಯಾಗಿರುತ್ತದೆ. ಮಾನವ ಸಂಪನ್ಮೂಲಾಭಿವೃದ್ಧಿಗೆ ಸಂಬಂಧಿಸಿದ ಫೆಡರಲ್ ಅಥಾರಿಟಿ(ಫಹರ್) ಈ ಕುರಿತು ಪ್ರಕಟನೆ ಹೊರಡಿಸಿದೆ. ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭಗೊಂಡು ಮಧ್ಯಾಹ್ನ ಎರಡು ಗಂಟೆಯವರೆಗೆ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಆದರೆ, ಹೆಚ್ಚು ಕೆಲಸದ ಆವಶ್ಯಕತೆಯಿರುವ ವಿಭಾಗಗಳ ಕೆಲಸಕಾರ್ಯಗಳು ಇದರ ನಂತರವೂ ಮುಂದುವರಿಯಲಿವೆ ಎಂದು ಪ್ರಕಟನೆ ತಿಳಿಸಿದೆ.