ನಟಿಗೆ ಕಿರುಕುಳ ಪ್ರಕರಣ: ವಿಚಾರಣೆಗೆ ತಾತ್ಕಾಲಿಕ ತಡೆಯಾಜ್ಞೆ

0
427

ಹೊಸದಿಲ್ಲಿ,ಮೇ3: ನಟಿಗೆ ಕಿರುಕುಳ ನೀಡಿದ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟು ತಡೆಯಾಜ್ಞೆ ಹೊರಡಿಸಿದೆ. ಕೇರಳದ ಸೂಪರ್‍‌ಸ್ಟಾರ್ ದಿಲೀಪ್‍ರ ಅರ್ಜಿಯಲ್ಲಿ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟು ಹೊರಡಿಸಿದ್ದು ನಟಿಯ ದೃಶ್ಯವಿರುವ ಮೆಮರಿ ಕಾರ್ಡ್‌ನ್ನು ತನಗೆ ನೀಡಬೇಕೆಂದು ದಿಲೀಪ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಬೇಸಿಗೆ ರಜೆಯ ಬಳಿಕ ಜುಲೈಯಲ್ಲಿ ಕೋರ್ಟು ವಿಚಾರಣೆಗೆತ್ತಿಕೊಳ್ಳಲಿದೆ. ಮೆಮರಿ ಕಾರ್ಡ್ ಮುಟ್ಟುಗೋಲು ಹಾಕಿದ ವಸ್ತು ಆಗಿದೆಯೇ ಅಥವಾ ದಾಖಲೆಯಾಗಿದೆಯೇ ಎನ್ನುವ ವಿಷಯವನ್ನು ತಿಳಿದುಕೊಳ್ಳಲು ಸರಕಾರ ಸಮಯವಕಾಶ ಕೋರಿದೆ. ಮೆಮರಿ ಕಾರ್ಡ್ ದಾಖಲೆಯಾಗಿದೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ ಮತ್ತು ದಾಖಲೆ ಸಹಿತ ಅದರ ಪ್ರತಿಯನ್ನು ತನಗೆ ಲಭ್ಯಗೊಳಿಸಬೇಕೆಂದು ವಿನಂತಿಸಿದರು.