ಉಪ ಚುನಾವಣೆ: 3 ಲೋಕಸಭೆ ಹಾಗೂ 7 ವಿಧಾನಸಭಾ ಸೀಟುಗಳಿಗೆ ಮತದಾನ

0
9

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಆರು ರಾಜ್ಯಗಳಲ್ಲಿ ತೆರವಾಗಿರುವ ಮೂರು ಲೋಕಸಭೆ ಹಾಗೂ ಏಳು ವಿಧಾನಸಭೆ ಸೀಟುಗಳಿಗೆ ಉಪಚುನಾವಣೆ ಆರಂಭವಾಗಿದೆ. ದಿಲ್ಲಿ, ತ್ರಿಪುರ, ಉತ್ತರಪ್ರದೇಶ, ಪಂಜಾಬ್, ಝಾರ್ಕಂಡ್, ಆಂಧ್ರಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ. ಪಂಜಾಬಿನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್‌ರವರು ಸಂಸದರಾಗಿದ್ದ ಸಂಗರೂರ್ ಮತ್ತು ಸಮಾಜವಾದಿ ಸಂಸದರಾಗಿದ್ದ ಅಖಿಲೇಶ್ ಯಾದವ್, ಆಝಮ್ ಖಾನ್‍ರಿಂದ ತೆರವಾಗಿರುವ ಉತ್ತರಪ್ರದೇಶದ ಅಝಂಗಡ, ರಾಮಪುರ ಲೋಕಸಭಾ ಸೀಟುಗಳಿಗೆ ಉಪಚುನಾವಣೆ ನಡೆಯುತ್ತಿದೆ. ಪಂಜಾಬಿನಲ್ಲಿ ಸಿಧು ಮೂಸೆ ಹತ್ಯೆಯ ನಂತರ ಆಮ್ ಆದ್ಮಿ ಪಾರ್ಟಿ ಎದುರಿಸುತ್ತಿರುವ ಮೊದಲ ಚುನಾವಣೆ ಇದು.

ತ್ರಿಪುರದಲ್ಲಿ ಟೌನ್ ಬೊರದೊದವಾಲಿಯಲ್ಲಿ ಚುನಾವಣೆಯು ನಡೆಯುತ್ತಿದ್ದು ಇಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅಭ್ಯರ್ಥಿಯಾಗಿದ್ದಾರೆ. ಆಮ್ ಆದ್ಮಿಯ ರಾಘವ್ ಚಡ್ಡ ರಾಜ್ಯಸಭಾ ಸಂಸದರಾದ ಮೇಲೆ ತೆರವಾದ ರಜೀಂದರ್ ನಗರ್ ಸ್ಥಾನದಲ್ಲಿ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಮತ್ತು ಆಮ್ ಆದ್ಮಿ ನಡುವೆ ಬಿರುಸಿನ ಸ್ಪರ್ಧೆ ಇಲ್ಲಿದೆ. ಝಾರ್ಕಂಡಿನ ಮಂದರ್, ಆಂಧ್ರದ ಆತ್ಮಕೂರ್, ತ್ರಿಪುರದ ಅಗರ್ತಲ, ಸುರ್ಮ, ಜುಬರಾಜ್‍ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here