ಸೌದಿ: 45ಲಕ್ಷ ದಾಟಿದ ವಿದೇಶಿ ಉಮ್ರಾ ಯಾತ್ರಿಗಳ ಸಂಖ್ಯೆ; ಮೂರನೇ ಸ್ಥಾನದಲ್ಲಿ ಭಾರತ

0
665

ಸನ್ಮಾರ್ಗ ವಾರ್ತೆ

ಜಿದ್ದಾ: ಈ ವರ್ಷ ಉಮ್ರಾ ಸೀಸನ್ ಆರಂಭವಾದಾಗಿನಿಂದ ಪುಣ್ಯಭೂಮಿಗೆ ಆಗಮಿಸಿದ ಯಾತ್ರಾರ್ಥಿಗಳ ಸಂಖ್ಯೆ 45ಲಕ್ಷ ದಾಟಿದೆ. ಹಜ್ಜ್ ಮತ್ತು ಉಮ್ರಾ ಸಚಿವಾಲಯವು ಇದುವರೆಗೆ ಉಮ್ರಾ ಮಾಡಿದ ಯಾತ್ರಿಕರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ನೀಡಲಾದ ಒಟ್ಟು 50 ಲಕ್ಷ ವೀಸಾಗಳ ಪೈಕಿ 40ಲಕ್ಷ ಜನರು ವಿಮಾನದ ಮೂಲಕ ಉಮ್ರಾ ಕರ್ಮ ನಿರ್ವಹಿಸಲು ಆಗಮಿಸಿದ್ದಾರೆ. ಹಾಗೂ ಐದು ಲಕ್ಷ ಜನರು ಭೂ ಮಾರ್ಗದ ಮೂಲಕ ಮತ್ತು 3,675 ಜನರು ಹಡಗಿನ ಮೂಲಕ ಆಗಮಿಸಿದ್ದಾರೆ.

ಈ ಪೈಕಿ ಇಂಡೋನೇಷ್ಯಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಮ್ರಾ ನಿರ್ವಹಿಸಲು ಆಗಮಿಸಿದ್ದು ಇಲ್ಲಿಯವರೆಗೆ 10,05265 ಯಾತ್ರಿಕರು ಆಗಮಿಸಿದ್ದಾರೆ. 7,92208 ಜನರೊಂದಿಗೆ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. 4,48765 ಭಾರತ ಮೂರನೇ ಸ್ಥಾನದಲ್ಲಿದೆ. ಈಜಿಪ್ಟ್‌ನಿಂದ 3,06,480, ಇರಾಕ್‌ನಿಂದ 2,39,640 ಮತ್ತು ಬಾಂಗ್ಲಾದೇಶದಿಂದ 2,31,092 ಜನರು ಉಮ್ರಾ ನಿರ್ವಹಿಸಿದ್ದಾಗಿ ವರದಿಯಾಗಿದೆ.