ಫ್ಯಾಶಿಸಂನ ವಿಭಜನಾ ರಾಜಕೀಯ ಅಪಾಯಕಾರಿ: ಸಾದಿಕಲಿ ಶಿಹಾಬ್ ತಂಙಳ್

0
386

ಸನ್ಮಾರ್ಗ ವಾರ್ತೆ-

ಕೇರಳ, ಡಿ. 14: ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಫ್ಯಾಶಿಸಂನ ಅಪಾಯಕಾರಿ ವಿಭಜನಾ ರಾಜಕೀಯ ವ್ಯಕ್ತವಾಗುತ್ತದೆ. ಅದನ್ನು ಬಲವಾಗಿ ಪ್ರತಿರೋಧಿಸುವುದಕ್ಕೆ ದೇಶ ಒಗ್ಗಟ್ಟು, ಅಖಂಡತೆಯಲ್ಲಿ ವಿಶ್ವಾಸ ಇಡುವ ಎಲ್ಲರೂ ರಂಗಪ್ರವೇಶಿಸಬೇಕೆಂದು ಪಾಣಕ್ಕಾಡ್ ಸಯ್ಯಿದ್ ಸಾದಿಕಲಿ ಶಿಹಾಬ್ ತಂಙಳ್ ಕರೆ ನೀಡಿದರು. ಹೋರಾಟದ ಇತಿಹಾಸದಲ್ಲಿ ನಾವು ಕಟ್ಟಿದ ನಮ್ಮ ಮಹಾನ್ ಭಾರತ ಎಲ್ಲ ಸಂಕಷ್ಟಗಳನ್ನು ನಿವಾರಿಸುವುದು.. ಹೆದರಿಸುತ್ತಿರುವ ಫ್ಯಾಶಿಸಂನ ಮುಂದೆ ಅಚಲರಾಗಿ, ಆತ್ಮವಿಶ್ವಾಸದಿಂದ ಹೋರಾಡಲು ಪ್ರತಿಯೊಬ್ಬ ಭಾರತೀಯನಿಗೂ ಸಾಧ್ಯವಾಗಬೇಕಿದೆ. ದೇಶದ ಜಾತ್ಯತೀತತೆ, ಬಹುತ್ವ ಎತ್ತಿಹಿಡಿಯಲು ನಾವು ಹೊಣೆಗಾರರು ಎಂದು ಅವರು ಹೇಳಿದರು.

ಅವರು ಪಟ್ಟಿಕ್ಕಾಡ್ ಜಾಮಿಯ ನೂರಿಯ ಅರಬಿಯ್ಯದ ವಾರ್ಷಿಕ ಸನದು ದಾನ ಸಮ್ಮೇಳನದ ಘೋಷಣೆ ಸಂಗಮವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಪ್ರೋ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.