ಕಾರ್ಟೂನ್ ವಿವಾದ: ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ

0
613

ಸನ್ಮಾರ್ಗ ವಾರ್ತೆ

ಜನೀವಾ,ಅ.31: ಪ್ರವಾದಿ ಮುಹಮ್ಮದ್(ಸ)ರನ್ನು ಅವಹೇಳನ ಮಾಡುವ ಕಾರ್ಟೂನ್‍ಗೆ ಸಂಬಂಧಿಸಿದ ವಿವಾದದಲ್ಲಿ ವಿಶ್ವಸಂಸ್ಥೆಯ ಭಯೋತ್ಪಾನಾ ವಿರೋಧಿ ಸಮಿತಿ ಆತಂಕ ವ್ಯಕ್ತಪಡಿಸಿದೆ. ಬೇರೆ ಬೇರೆ ಧರ್ಮ ವಿಶ್ವಾಸ ಮತ್ತು ರಾಜಕೀಯ ದೃಷ್ಟಿಕೋನ ಇರುವವರು ಪರಸ್ಪರ ಗೌರವದಿಂದಿರಬೇಕೆಂದು ಸಮಿತಿ ಮುಖ್ಯಸ್ಥ ಮಿಗೆಲ್ ಆಂಚಲ್ ಮೊರಟಿನಸ್ ಮನವಿ ಮಾಡಿದ್ದಾರೆ.

ನಿರಪರಾಧಿಗಳಾದ ಜನರ ಧರ್ಮ, ವಿಶ್ವಾಸ, ವಂಶದ ಹೆಸರಿನಲ್ಲಿ ದಾಳಿಮಾಡಲು ಪ್ರಚೋದಕ ಕ್ಯಾರಿಕೇಚರ್ ಕಾರಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಧರ್ಮಗಳು, ಧರ್ಮದ ಚಿಹ್ನೆಗಳು ಅಪಮಾನಿಸುವುದು ಉದ್ವಿಗ್ನತೆ ಸೃಷ್ಟಿಸುತ್ತದೆ. ಭಯೋತ್ಪಾದನೆ ಮತ್ತು ಸಮಾಜದಲ್ಲಿ ಕೋಮುವಾದ, ಒಡಕಿಗೆ ಕಾರಣವಾಗಬಹುದು. ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಪರಸ್ಪರಾಶ್ರಿತ, ಪರಸ್ಪರ ಸಂಬಂಧ ಇರುವ ಮೌಲ್ಯಗಳನ್ನು ಪರಸ್ಪರ ಬಲಪಡಿಸುತ್ತದೆ. ಈ ಮೌಲ್ಯಗಳನ್ನು ರಕ್ಷಿಸುವುದು ಸದಸ್ಯ ದೇಶಗಳ ಪ್ರಾಥಮಿಕ ಜವಾಬ್ದಾರಿ ಎಂದು ಮೊರಟಿನಸ್ ಹೇಳಿದರು.