ಕರ್ನಾಟಕ, ಕೇರಳದಲ್ಲಿ ಐಎಸ್ ಭಯೋತ್ಪಾದಕರು: ವಿಶ್ವಸಂಸ್ಥೆ ವರದಿ ಸತ್ಯಕ್ಕೆ ದೂರವಾದುದು ಎಂದ ಕೇಂದ್ರ ಸರಕಾರ

0
368

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21:ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಐಎಸ್ ಭಯೋತ್ಪಾದಕರು ವ್ಯಾಪಕವಾಗಿ ನೆಲೆಸಿದ್ದಾರೆ ಎಂಬ ವಿಶ್ವಸಂಸ್ಥೆಯ ವರದಿ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ವಿಶ್ವ ಸಂಸ್ಥೆಯ ವರದಿಯ ಕುರಿತು ಲೋಕಸಭೆಯಲ್ಲಿ ಎತ್ತಲಾದ ಪ್ರಶ್ನೆಗೆ ಕೇಂದ್ರ ಗೃಹ ಸಹಸಚಿವ ಜಿ.ಕಿಶನ್ ರೆಡ್ಡಿ ಈ ರೀತಿ ಉತ್ತರ ನೀಡಿದ್ದಾರೆ.

ಸರಕಾರ ಸರಿಯಾಗಿ ನಿಗಾವಹಿಸುತ್ತಿದೆ. ದೊಡ್ಡ ಮಟ್ಟದಲ್ಲಿ ಐಎಸ್ ಉಪಸ್ಥಿತಿ ಇದೆ ಎಂಬುದು ಸತ್ಯವಲ್ಲ ಎಂದು ಸಚಿವರು ತಿಳಿಸಿದರು.

ಐಎಸ್, ಅಲ್‍ ಕಾಯಿದಾ, ಅದಕ್ಕೆ ಸಂಬಂಧಿಸಿದ ಸಂಘಟನೆಗಳು ಕರ್ನಾಟಕ, ಕೇರಳದಲ್ಲಿವೆ ಎಂದು ವಿಶ್ವ ಸಂಸ್ಥೆ ತನ್ನ 26ನೇ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಇದುವರೆಗೆ 34 ಐಎಸ್ ಪ್ರಕರಣಗಳು, 20 ಲಶ್ಕರ್ ಪ್ರಕರಣಗಳು ದಾಖಲಾಗಿವೆ. 240 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದರು.