ಅಯೋಧ್ಯೆ ಮಸೀದಿ ನಿರ್ಮಾಣ ಪರಂಪರಾಗತ ರೂಪದಲ್ಲಿರುವುದಿಲ್ಲ

0
460

ಸನ್ಮಾರ್ಗ ವಾರ್ತೆ

ಲಕ್ನೊ,ಸೆ.21: ಬಾಬರಿ ಮಸೀದಿ ಕೆಡವಿದ್ದಕ್ಕೆ ಬದಲಿಯಾಗಿ ಸುಪ್ರೀಂ ಕೋರ್ಟು ಸೂಚಿಸಿದ ಪ್ರಕಾರ ನಿಒಡಲಾಗಿರುವ ಐದು ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳುವ ಮಸೀದಿ ಪರಂಪರಾಗತ ರೂಪದಲ್ಲಿರುವುದಿಲ್ಲ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತಿಳಿಸಿದೆ.

ಮಸೀದಿಗೆ ‘ಬಾಬರಿ ಮಸೀದಿ’ಎಂದಾಗಲಿ, ಚಕ್ರವರ್ತಿಯ ಅಥವಾ ರಾಜರ ಹೆಸರಾಗಲಿ ಇರಿಸುವುದಿಲ್ಲ ಎಂದು ಫೌಂಡೇಶನ್ ಕಾರ್ಯದರ್ಶಿ ಅತ್ತರ್ ಹುಸೈನ್ ಹೇಳಿದರು.

ಮಕ್ಕದ ಕಾಬಾ ಭವನದಂತೆ ಚದುರಾಕೃತಿಯಲ್ಲಿ ಮಸೀದಿ ಕಟ್ಟಡ ಇರುವ ಸಾಧ್ಯತೆ ಇದೆ ಎಂದು ನಿರ್ಮಾಣ ಹೊಣೆಯನ್ನು ಹೊಂದಿರುವ ವಾಸ್ತು ಶಿಲ್ಪಿ ಎಸ್.ಎಂ.ಅಕ್ತರ್‌ರನ್ನು ಉದ್ಧರಿಸಿ ಅತ್ತರ್ ಹುಸೈನ್ ಹೇಳಿದರು.

ಮಸೀದಿಯ ಜೊತೆ ಮ್ಯೂಸಿಯಂ, ಆಸ್ಪತ್ರೆ, ಸಂಶೋಧನಾ ಕೇಂದ್ರ ಇರಲಿದ್ದು, ಇದಕ್ಕಾಗಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಫೌಂಡೇಶನ್ ಪೋರ್ಟಲ್ ಆರಂಭಿಸಲಾಗುವುದು ಎಂದು ಅತ್ತರ್ ಹುಸೇನ್ ಹೇಳಿದರು.

ಯೋಗಿ ಸರಕಾರದ ಬೆಂಬಲದ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸ್ಥಾಪಿಸಿದೆ. ಅಯೋಧ್ಯೆಯ ಧಾನ್ನಿಪುರ ಗ್ರಾಮದಲ್ಲಿ ಉತ್ತರಪ್ರದೇಶ ಸರಕಾರವು ಫೌಂಡೇಶನ್‍ಗೆ ಕೊಟ್ಟ ಐದು ಎಕರೆ ಸ್ಥಳದಲ್ಲಿ ಮಸೀದಿ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ನಿರ್ಮಾಣಗೊಳ್ಳಲಿದೆ.